ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಟರ್ಕಿಗೆ ಭೇಟಿ ನೀಡುವಾಗ ಅವರ ಹತ್ಯೆಗೆ ಯೋಜಿಸಿದ ಸಂಚು ಬಯಲಾಗಿದೆ. ಒಬಾಮಾರನ್ನು ಹತ್ಯೆ ಮಾಡಲು ಯೋಜಿಸಿದ್ದಾಗಿ ಹೇಳಿದ ವ್ಯಕ್ತಿಯೊಬ್ಬನನ್ನು ಟರ್ಕಿ ಪೊಲೀಸರು ಬಂಧಿಸಿದ್ದಾರೆಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ತಾನ್‌ಬುಲ್‌ನಲ್ಲಿ ಕಳೆದ ಶುಕ್ರವಾರ ಟರ್ಕಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾಗಿ ವಾಷಿಂಗ್ಟನ್‌ನಲ್ಲಿ ಗುಪ್ತಚರ ಸೇವೆ ಸೋಮವಾರ ರಾತ್ರಿ ತಿಳಿಸಿದೆ. ಅಧ್ಯಕ್ಷರು ತಕ್ಷಣಕ್ಕೆ ಯಾವುದೇ ಅಪಾಯದಲ್ಲಿಲ್ಲ ಎಂದು ಗುಪ್ತಚರ ಸೇವೆ ವಕ್ತಾರ ಡೋನೊವಾನ್ ತಿಳಿಸಿದ್ದಾರೆ.
ವ್ಯಕ್ತಿಯ ಬಂಧನದ ಎರಡು ದಿನಗಳ ಬಳಿಕ ಭಾನುವಾರದವರೆಗೆ ಒಬಾಮಾ ಟರ್ಕಿಗೆ ಆಗಮಿಸಲಿಲ್ಲವೆಂದು ತಿಳಿದುಬಂದಿದೆ. ಶಂಕಿತನ ಬಗ್ಗೆ ಯಾವುದೇ ಮಾಹಿತಿಯನ್ನು ಗುಪ್ತಚರ ಸೇವೆ ಬಿಡುಗಡೆ ಮಾಡುತ್ತಿಲ್ಲವೆಂದು ಡೋನೊವನ್ ಹೇಳಿದ್ದಾರೆ.ಅಧ್ಯಕ್ಷರಿಗೆ ವಿದೇಶದಲ್ಲಿ ಬೆದರಿಕೆ ಉಂಟಾದಾಗ ಸಾಮಾನ್ಯ ವಿಧಿವಿಧಾನದಂತೆ ಹತ್ಯೆ ಸಂಚಿಗೆ ಸಂಬಂಧಪಟ್ಟಂತೆ ಟರ್ಕಿ ಅಧಿಕಾರಿಗಳ ಜತೆ ಗುಪ್ತಚರ ಸೇವೆ ಸಂಪರ್ಕ ಹೊಂದಿದೆ. |