ಸ್ವದೇಶದಲ್ಲಿ ಬಾಡಿಗೆ ಹಂತಕರನ್ನು ನೇಮಿಸಿಕೊಳ್ಳುವ ಮೂಲಕ ದೇಶದ ವಿವಿದೆಡೆ ಆತ್ಮಾಹುತಿ ದಾಳಿಗಳನ್ನು ಯೋಜಿಸುತ್ತಿರುವ ವಿಷಯ ಮೊದಲ ಬಾರಿಗೆ ಬಹಿರಂಗವಾಗಿದೆ.
ಸ್ವದೇಶದವರ ವಿರುದ್ಧವೇ ಪಾಕಿಸ್ತಾನಿಯರು ಆತ್ಮಾಹುತಿ ದಾಳಿ ನಡೆಸುತ್ತಿದ್ದು, ಬಾಡಿಗೆ ಹಂತಕರು ಈ ದಾಳಿಗಳನ್ನು ನಡೆಸುತ್ತಿದ್ದಾರೆಂದು ಉನ್ನತ ದರ್ಜೆಯ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ.
ಅಲ್ಪಮೊತ್ತಕ್ಕಾಗಿ ನೇಮಕವಾದ ಜನರು ಈ ದಾಳಿಗಳನ್ನು ನಡೆಸಿದ್ದಾರೆಂದು ಒಳಾಡಳಿತ ಸಚಿವಾಲಯದ ಮುಖ್ಯಸ್ಥ ರೆಹ್ಮಾನ್ ಮಲ್ಲಿಕ್ ತಿಳಿಸಿದರು. ವಾಯವ್ಯ ಗಡಿ ಪ್ರಾಂತ್ಯದ ಕೆಲವು ಪ್ರದೇಶಗಳಲ್ಲಿ ಆತ್ಮಾಹುತಿ ಸ್ಫೋಟಗಳನ್ನು ನಡೆಸಲು ಬಾಡಿಗೆ ಜನರು ಸಿಗುತ್ತಾರೆ ಮತ್ತು ಅಲ್ಲಿ ಆತ್ಮಾಹುತಿ ಕವಚಗಳು ಮಾರಾಟಕ್ಕಿವೆ ಎಂಬ ಮಾಧ್ಯಮದ ವರದಿಗಳಿಗೆ ಅವರು ದನಿಗೂಡಿಸಿದ್ದಾರೆ.
ಆತ್ಮಾಹುತಿ ಬಾಂಬರ್ ಬೆಲೆ 5 ಲಕ್ಷದಿಂದ 15 ಲಕ್ಷಗಳ ನಡುವೆ ಇರುತ್ತದೆ ಮತ್ತು ಬಾಂಬರ್ ಕುಟುಂಬಕ್ಕೆ 5 ಲಕ್ಷ ರೂ. ಲಭ್ಯವಾಗುತ್ತದೆ ಎಂದು ಭಾನುವಾರದ ಚಕ್ವಾಲ್ ಆತ್ಮಾಹುತಿ ದಾಳಿಯ ಬದುಕುಳಿದವರ ಭೇಟಿಗೆ ತೆರಳಿದ್ದ ಮಲಿಕ್ ಮಾಧ್ಯಮಕ್ಕೆ ತಿಳಿಸಿದರು.ಇಂತಹ ಜನರು ಪಾಕಿಸ್ತಾನದ ಶತ್ರುಗಳೆಂದು ಬಣ್ಣಿಸಿದ ಅವರು, ಅವರು ರಾಷ್ಟ್ರವನ್ನು ಅಸ್ಥಿರಗೊಳಿಸಲು ಬಯಸಿದ್ದು, ಅವರ ಷಡ್ಯಂತ್ರಗಳನ್ನು ವಿಫಲಗೊಳಿಸುವಂತೆ ಜನತೆಗೆ ಎಚ್ಚರಿಸಿದರು. |