ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಜೀವಂತ ಮಹಿಳೆ ಸೋಮವಾರ ಇಲ್ಲಿ ತಮ್ಮ 115ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಪಶ್ಚಿಮ ಕಾನ್ವಾಲೆಸೆಂಟ್ ಆಸ್ಪತ್ರೆಯಲ್ಲಿ ದೀರ್ಘಾಯುಷಿ 115 ವರ್ಷ ವಯಸ್ಸಿನ ಗೆರ್‌ಟ್ರ್ಯೂಡ್ ಬೈನ್ಸ್ ಅವರನ್ನು ಮಧುರ ಸಂಗೀತ, ಅಧ್ಯಕ್ಷರ ಪತ್ರ ಮತ್ತು ಎರಡು ಕೇಕ್ ವಿತರಣೆ ಮೂಲಕ ಗೌರವಿಸಲಾಯಿತು. ಹುಟ್ಟುಹಬ್ಬದ ಆಚರಣೆಯಲ್ಲಿ ಹೆಚ್ಚು ಮಾತನಾಡದ ಬೈನ್ಸ್‌ಗೆ ಆಕೆಯ ಸ್ನೇಹಿತೆಯರು ಹಾಡು ಹೇಳಿದರು ಮತ್ತು ವಿಶ್ವದ ಅತ್ಯಂತ ದೀರ್ಘಾಯುಷಿ ವ್ಯಕ್ತಿಯೆಂಬ ಗಿನ್ನಿಸ್ ವಿಶ್ವ ದಾಖಲೆಯ ಘೋಷಣೆಯನ್ನು ಬೈನ್ಸ್ ಸ್ವೀಕರಿಸಿದರು.
1894ರಲ್ಲಿ ಜಾರ್ಜಿಯದ ಶೆಲ್‌ಮ್ಯಾನ್‌ನಲ್ಲಿ ಹುಟ್ಟಿದ ಬೈನ್ಸ್, 115 ವರ್ಷ ವಯಸ್ಸಿನ ಮಹಿಳೆ ಮಾರಿಯ ಡೆ ಜೀಸಸ್ ಪೋರ್ಚುಗಲ್‌ನಲ್ಲಿ ಕಳೆದ ಜನವರಿಯಲ್ಲಿ ಮೃತಪಟ್ಟ ಬಳಿಕ ವಿಶ್ವದ ಅತ್ಯಂತ ಹಿರಿಯ ಮಹಿಳೆಯೆಂಬ ಪಟ್ಟವನ್ನು ಅಲಂಕರಿಸಿದರು.
ಬೈನ್ಸ್ ಎರಡು ವಿಷಯಗಳಲ್ಲಿ ಅತೃಪ್ತರಾಗಿದ್ದಾರೆಂದು ಅವರ ವೈದ್ಯ ಹೇಳುತ್ತಾರೆ. ಒಂದನೆಯದು ಅವರಿಗೆಉಪ್ಪು ಹಚ್ಚಿದ ಹಂದಿಯ ಮಾಂಸ ರುಚಿಸುವುದಿಲ್ಲ. ಅದು ತಾಜಾ ಇರುವುದಿಲ್ಲವೆಂದು ದೂರುತ್ತಾರೆಂದು ಹೇಳಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಎರಡನೆಯದು ಮಂಡಿಯ ಕೀಲುನೋವಿನ ಬಗ್ಗೆ ಅವರಲ್ಲಿ ಅತೃಪ್ತಿ ಮೂಡಿದೆ. ತಮ್ಮ ದೀರ್ಘಾಯುಷ್ಯಕ್ಕೆ ದೇವರಿಗೆ ಧನ್ಯವಾದ ಅರ್ಪಿಸುವ ಅವರು, ತಾವು ಮದ್ಯಪಾನ, ಧೂಮಪಾನ ಮಾಡುವುದಿಲ್ಲವೆಂದು ಹೇಳಿದ್ದಾರೆ.
ಬರಾಕ್ ಒಬಾಮಾ ಅವರ ಅಧ್ಯಕ್ಷಗಿರಿಗೆ ಮತ ಚಲಾಯಿಸಿದ ಬೈನ್ಸ್, ಅವರು ವರ್ಣೀಯರ ಪರವಾದ್ದರಿಂದ ಬೆಂಬಲಿಸಿದ್ದಾಗಿ ಅವರು ಹೇಳಿದರು. ಬೈನ್ಸ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿ ಒಬಾಮಾ ಅವರಿಂದ ಪತ್ರ ಸ್ವೀಕರಿಸಿದ್ದಾರೆ. ಓಹಿಯೊ ವಿವಿಯ ವಸತಿನಿಲಯದಲ್ಲಿ ಪರಿಚಾರಿಕೆಯಾಗಿ ಕೆಲಸ ಮಾಡುತ್ತಿದ್ದ ಬೈನ್ಸ್ ಬಳಿಕ ಲಾಸ್‌ಏಂಜಲ್ಸ್ ಕನ್ವಾಲಸೆಂಟ್ ಆಸ್ಪತ್ರೆಯಲ್ಲಿ 10 ವರ್ಷಗಳ ಕಾಲದಿಂದ ನೆಲೆಸಿದ್ದಾರೆ. |