ದಲೈಲಾಮಾಗಳ ಮುಂಚಿನ ಪ್ರಾರ್ಥನಾಸ್ಥಳವಾದ ಭವ್ಯವಾದ ಪೊಟಾಲಾ ಅರಮನೆ ಟಿಬೆಟ್ ಧಾರ್ಮಿಕ ನಾಯಕತ್ವದ ಎಲ್ಲ ನೆನಪುಗಳನ್ನು ಬಿಚ್ಚಿಡುತ್ತದೆ. ಆದರೆ ಭಾರತದಲ್ಲಿ ಅಜ್ಞಾತರಾಗಿ ಉಳಿದ 14ನೇ ದಲೈಲಾಮಾಗೆ ಸಂಬಂಧಿಸಿದ ಯಾವ ವಿಚಾರವನ್ನೂ ಬಿಂಬಿಸುವುದಿಲ್ಲ.
ಶತಮಾನಗಳ ಪ್ರಾಚೀನದ ಸ್ಮಾರಕವು ಈಗ ವಿಶ್ವಪಾರಂಪರಿಕ ಸ್ಮಾರಕವಾಗಿದ್ದು, 14ನೇ ದಲೈಲಾಮಾ 1959ರಂದು ನಗರವನ್ನು ತ್ಯಜಿಸುವ ಮುಂಚೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಪ್ರಾರ್ಥನಾ ಮಂದಿರವಿದೆ. ಅಲ್ಲಿ ದಲೈಲಾಮಾ ಪೂರ್ವಾಧಿಕಾರಿಯಾದ 13ನೇ ದಲೈಲಾಮಾ ಮತ್ತು 10ನೆಯವರಾದ ಪಂಚೇನ್ ಲಾಮಾ ಅವರ ಚಿತ್ರಗಳು ಗೋಡೆಗಳನ್ನು ಅಲಂಕರಿಸಿವೆ. ಆದರೆ 12ನೇ ಮಹಡಿಯಲ್ಲಿ ವಾಸವಿರುವ 77 ಭಿಕ್ಕುಗಳಲ್ಲಿ ಯಾರೊಬ್ಬರೂ ಪ್ರಸ್ತುತ ದಲೈಲಾಮಾ ಕುರಿತು ತುಟಿಬಿಚ್ಚುವುದಿಲ್ಲ.
ದಲೈಲಾಮಾ ಅಧ್ಯಯನ ಮಾಡುತ್ತಿದ್ದ ಕೊಠಡಿ, ಮಲಗುವ ಕೋಣೆ ಮತ್ತು ಅವರು ಅನುಯಾಯಿಗಳನ್ನು ಭೇಟಿ ಮಾಡುತ್ತಿದ್ದ ಸ್ಥಳ ಸೂಕ್ತ ರೂಪದಲ್ಲಿದ್ದರೂ ಅವುಗಳನ್ನು ಯಾರೊಬ್ಬರೂ ಬಳಸುವುದಿಲ್ಲ.ಪೊಟಾಲಾ ಅರಮನೆಯು ವಿಶ್ವ ಪಾರಂಪರಿಕ ಸ್ಥಳವಾಗಿದ್ದು, ನಮ್ಮ ಸಂಸ್ಕೃತಿ ಮತ್ತು ಇತಿಹಾಸ ಬಿಂಬಿಸುವುದರಿಂದ ಅದರ ಬಗ್ಗೆ ನಿಗಾ ವಹಿಸಬೇಕಿದೆ. ದಲೈಲಾಮಾಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೊಟಾಲಾ ಅರಮನೆಯ ನಿರ್ದೇಶಕ ಕಲ್ಸಾಂಗ್ ಹೇಳುತ್ತಾರೆ.
ದಲೈಲಾಮಾ ರಕ್ಷಣೆಯ ದೈವಗಳಿಗೆ ಗೌರವ ಸಲ್ಲಿಸುತ್ತಿದ್ದ ಚಾಪೆಲ್, ಇಲ್ಲಿದ್ದ ಹೆಚ್ಚು ಕಾಲವನ್ನು ಕಳೆದಿದ್ದ ಚಿಮಿ ನಾಮಗಯಾಲ್ ಮತ್ತು ಮೈತ್ರೇಯ ಬೌದ್ಧ ಪೂಜಾ ಕೇಂದ್ರದಲ್ಲಿ ಸಾಂಪ್ರದಾಯಿಕ ದೀಪ ಬೆಳಗುವ ಜಾಮಕಾಂಗ್‌ನ್ನು ಕೂಡ ಸುಸ್ಥಿತಿಯಲ್ಲಿ ಇಡಲಾಗಿದೆ. |