ಉಗ್ರಗಾಮಿಗಳಿಂದ ಪ್ರತೀಕಾರದ ಬೆದರಿಕೆಗಳಿಗೆ ಜಗ್ಗದ ಅಮೆರಿಕ ಪಾಕಿಸ್ತಾನ ಬುಡಕಟ್ಟು ಪ್ರದೇಶಗಳಲ್ಲಿ ಡ್ರೋನ್ ದಾಳಿಗಳನ್ನು ತೀವ್ರಗೊಳಿಸಲು ಇಚ್ಛಿಸಿದ್ದು, ಪಾಕ್‌ನೊಳಗೆ ಇನ್ನೂ ದೂರದವರೆಗೆ ವಿಸ್ತರಿಸಲು ನಿರ್ಧರಿಸಿದೆಯೆಂದು ಮಾಧ್ಯಮದ ವರದಿ ತಿಳಿಸಿದೆ.
ಏತನ್ಮಧ್ಯೆ, ಡ್ರೋನ್ ವಿಮಾನಗಳ ಕ್ಷಿಪಣಿ ದಾಳಿಗಳಿಂದ ಇನ್ನಷ್ಟು ಹಿಂಸಾಚಾರ ಭುಗಿಲೇಳುತ್ತದೆಂದು ಪಾಕ್ ಅಧಿಕಾರಿಗಳು ಆತಂಕ ಪಟ್ಟಿದ್ದಾರೆ.ಆದರೆ ಕ್ಷಿಪಣಿ ದಾಳಿಗಳನ್ನು ಹೆಚ್ಚಿಸುವ ಯೋಜನೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಅಲ್ ಖಾಯಿದಾಗೆ ಅಡ್ಡಿಪಡಿಸುವ, ಸೋಲಿಸುವ ಒಬಾಮಾ ಗುರಿಗೆ ಒತ್ತುನೀಡುತ್ತದೆಂದು ಅಮೆರಿಕ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಕ್ಷಿಪಣಿ ದಾಳಿಗಳು ಪ್ರಮಾದವಶಾತ್ ನಾಗರಿಕರನ್ನು ಕೊಂದರೆ ತೆರುವ ಬೆಲೆ ಅಧಿಕವೆಂದು ಸೆನೆಟರ್ ಕಾರ್ಲ್ ಲೆವಿನ್ ಹೇಳಿದ್ದು, ಆದರೆ ಕ್ಷಿಪಣಿ ದಾಳಿಗಳು ಪರಿಮಾಣಕಾರಿ ಅಸ್ತ್ರವೆಂದು ಪ್ರತಿಪಾದಿಸಿದ್ದಾರೆ. |