ರಾಷ್ಟ್ರದಲ್ಲಿ ಅಲ್ ಖಾಯಿದಾ ಮುಖಂಡ ಒಸಾಮಾ ಬಿನ್ ಲಾಡೆನ್ ಸಂಭವನೀಯ ಉಪಸ್ಥಿತಿ ಬಗ್ಗೆ ತಮಗೆ ಸುಳಿವು ಸಿಕ್ಕಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಒಸಾಮಾ ಕಡಿದಾದ ಬುಡಕಟ್ಟು ಪ್ರದೇಶಗಳಲ್ಲಿ ಅಡಗಿದ್ದಾನೆಂದು ಅಮೆರಿಕ ಹೇಳಿದ ಬಳಿಕ ಪಾಕ್ ಹೇಳಿಕೆ ಹೊರಬಿದ್ದಿದೆ.
ನೂತನ ವಿದ್ಯುತ್ ಘಟಕದ ಉದ್ಘಾಟನೆ ಅಂಗವಾಗಿ ನಡೆದ ಸಮಾರಂಭದ ನೇಪಥ್ಯದಲ್ಲಿ ಪ್ರಧಾನಿ ಗಿಲಾನಿ ಮಾತನಾಡುತ್ತಿದ್ದರು. ಪ್ರಕ್ಷುಬ್ಧ ಸ್ವಾತ್ ಕಣಿವೆಯಲ್ಲಿ ಇಸ್ಲಾಮ್ ಕಾನೂನು ಅನುಷ್ಠಾನವನ್ನು ಆ ಪ್ರದೇಶದಲ್ಲಿ ಸಹಜತೆ ಮರುಸ್ಥಾಪಿಸುವ ಸರ್ಕಾರದ ಪ್ರಯತ್ನ ಎಂದು ಗಿಲಾನಿ ಸಂಬಂಧ ಕಲ್ಪಿಸಿದರು.
ಸ್ವಾತ್ ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಯಾದರೆ ಶೀಘ್ರ ನ್ಯಾಯದ ಕಾನೂನಿಗೆ ಅಧ್ಯಕ್ಷರು ಅನುಮೋದನೆ ನೀಡುತ್ತಾರೆಂದು ಹೇಳಿದರು.ಬಹುತೇಕ ಇಡೀ ಸ್ವಾತ್ ತಾಲಿಬಾನ್ ಮುಷ್ಠಿಯಲ್ಲಿದ್ದು, ಕಾಜಿ ಅಥವಾ ಇಸ್ಲಾಮಿಕ್ ಕೋರ್ಟ್‌ನ ಸಮಾನಾಂತರ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಜನರಿಗೆ ಸ್ವತಃ ಶಿಕ್ಷೆ ವಿಧಿಸುತ್ತಿದ್ದಾರೆ. |