ಲಾಕ್ವಿಲಾ: ಮಧ್ಯ ಇಟಲಿಯಲ್ಲಿ ನಡೆದ ಭಾರೀ ಭೂಕಂಪದಲ್ಲಿ ಸತ್ತವರ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ಈವರೆಗೆ ಸುಮಾರು 200ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಕುಸಿದುಬಿದ್ದ ಕಟ್ಟಡಗಳ ಅವಶೇಷಗಳಡಿಯಿಂದ ಮೃತದೇಹಗಳನ್ನು ಹೊರತೆಗೆವ ಕಾರ್ಯ ನಡೆಯುತ್ತಿದ್ದು, ಹಗಲು- ರಾತ್ರಿಯೆನ್ನದೆ ರಕ್ಷಣಾ ಕಾರ್ಯ ನಡೆಯುತ್ತಿದೆ. 30 ವರ್ಷಗಳಲ್ಲೇ ಇಟಲಿಯಲ್ಲಿ ನಡೆದ ಭೀಕರ ಪ್ರಾಕೃತಿ ದುರಂತ ಇದಾಗಿದ್ದು, 1500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 100ಕ್ಕೂ ಹೆಚ್ಚು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರಧಾನಿ ಸಿಲ್ವಿಯೋ ತಿಳಿಸಿದ್ದಾರೆ. ಸೋಮವಾರದ ನಂತರವೂ ಹಲವು ಸಣ್ಣ ಸಣ್ಣ ಕಂಪನಗಳು ನಡೆದಿರುವುದರಿಂದ ಇಟಲಿಯ ಜನ ಇನ್ನಷ್ಟು ಕಂಗಾಲಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. |