ಉತ್ತರ ಫಿಲಿಪೈನ್ಸ್‌ನ ಕಾರ್ಖಾನೆಯೊಂದರಲ್ಲಿ ಬಾಯ್ಲರೊಂದು ತೀವ್ರಬಿಸಿಯಾಗಿ ಸ್ಫೋಟಿಸಿದ್ದರಿಂದ ಕನಿಷ್ಟ 12 ಕಾರ್ಖಾನೆ ಕಾರ್ಮಿಕರು ಸತ್ತಿದ್ದು ಐವರು ಗಾಯಗೊಂಡಿದ್ದಾರೆಂದು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರು ಬುಧವಾರ ತಿಳಿಸಿದರು.
ಸ್ಟ್ರೆಯೋಫೋಂ ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಸ್ಫೋಟ ಆಕಸ್ಮಿಕ ಘಟನೆಯೆಂದು ಹೇಳಿದ ಬುಲಾಕಾನ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಬಂಟೋಲಾ ವಿಧ್ವಂಸಕಾರಿ ಚಟುವಟಿಕೆಯನ್ನು ತಳ್ಳಿಹಾಕಿದ್ದಾರೆ.
ಸ್ಫೋಟದಿಂದ ರಾತ್ರಿಪಾಳಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಗೊಂಡಿದ್ದ ಇನ್ನೂ 8 ಮಂದಿ ಮೃತಪಟ್ಟಿದ್ದಾರೆಂದು ಬಂಟೋಲಾ ತಿಳಿಸಿದರು. ಐವರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಕಣ್ಮರೆಯಾದ ಇನ್ನೂ ಮೂವರು ಕಾರ್ಮಿಕರಿಗಾಗಿ ನಾಶಗೊಂಡು ಕಾರ್ಖಾನೆ ಕಟ್ಟಡದಲ್ಲಿ ಅಗ್ನಿಶಾಮಕ ಪಡೆ ಶೋಧಿಸುತ್ತಿದೆಯೆಂದು ಅವರು ಹೇಳಿದ್ದಾರೆ. |