ಕೆನಡಾದ ವಿಮಾನನಿಲ್ದಾಣದಿಂದ ಅಪಹರಿಸಲಾದ ಸಣ್ಣ ವಿಮಾನವೊಂದನ್ನು ಅಮೆರಿಕದ ಸಮರವಿಮಾನಗಳು ಅಡ್ಡಗಟ್ಟಿ ಮಿಸ್ಸೋರಿಯಲ್ಲಿ ಬಲವಂತದಿಂದ ಇಳಿಸಿದ ಘಟನೆ ನಡೆದಿದೆ.
ಪೈಲಟ್ ಮನಬಂದಂತೆ ವಿಮಾನ ಚಲಾಯಿಸಿ ಸಂಪರ್ಕ ಹೊಂದುವಂತೆ ಮಾಡಿದ ಮನವಿಗೆ ಸ್ಪಂದಿಸಲಿಲ್ಲವೆಂದು ಪೆಂಟಗಾನ್ ಅಧಿಕಾರಿಗಳು ಹೇಳಿದ್ದಾರೆ. ಮಿಚಿಗನ್, ವಿಸ್ಕಾನ್‌ಸಿನ್ ಮತ್ತು ಇಲ್ಲಿನಾಯ್ಸ್‌ವರೆಗೆ ಕದ್ದ ವಿಮಾನವನ್ನು ಸಮರವಿಮಾನಗಳು ಬೆನ್ನಟ್ಟಿದವು.
ಕಟ್ಟಕಡೆಗೆ ಎಲ್ಸಿನಾರ್ ಹೆದ್ದಾರಿಯಲ್ಲಿ ಪೈಲಟ್ ವಿಮಾನವನ್ನು ಇಳಿಸಿದ. ಪೈಲಟ್ ವಿಮಾನ ಇಳಿಸಿದ ಬಳಿಕ ಅವನನ್ನು ಬಂಧಿಸಿದ ಸ್ಟೇಟ್ ಟ್ರೂಪರ್‌ಗೆ ' ತಾನು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದು, ಅಷ್ಟೊಂದು ಧೈರ್ಯ ಇರಲಿಲ್ಲವಾದ್ದರಿಂದ ಶೂಟ್ ಔಟ್‌ಗೆ ಬಲಿಯಾಗಲು ಬಯಸಿದ್ದಾಗಿ' ಹೇಳಿದ್ದಾನೆ.
ಥಂಡರ್ ಬೇ ಏರ್‌ಪೋರ್ಟ್ ಹಾರಾಟದ ಶಾಲೆಯಿಂದ ಆಗಮಿಸಿದ ಸೆಸ್ನಾ 172 ವಿಮಾನದಲ್ಲಿ ಬೇಲಿ ಹಾರಿದ ವ್ಯಕ್ತಿಯೊಬ್ಬ ಕುಳಿತುಕೊಂಡನೆಂದು ಶಾಲೆಯ ಮುಖ್ಯಸ್ಥೆ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಬಳಸುತ್ತಿದ್ದರಿಂದ ಬೀಗದಕೈಗಳು ವಿಮಾನದಲ್ಲೇ ಇದ್ದವು ಎಂದು ಅವರು ಹೇಳಿದರು. ಅಮೆರಿಕಕ್ಕೆ ವಿಮಾನ ಕೊಂಡೊಯ್ದು ಅಲ್ಲಿ ಗುಂಡಿಗೆ ಬಲಿಯಾಗಲು ಪೈಲಟ್ ಬಯಸಿದ್ದನೆಂದು ಟ್ರೂಪರ್ ತಿಳಿಸಿದ್ದಾರೆ. |