ಇಸ್ಲಾಮಾಬಾದ್: ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆಗೆ ಅಮೆರಿಕದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಪಾಕಿಸ್ತಾನ ಇದೀಗ ತನ್ನ ನೆಲದಲ್ಲಿ ಉಗ್ರರನ್ನು ತಾನೇ ಸದೆಬಡಿಯುತ್ತೇನೆ. ಅದಕ್ಕಾಗಿ ಅಮೆರಿಕ ನೆರವು ಬೇಕಾಗಿಲ್ಲ ಎಂದು ಘೋಷಿಸಿದೆ. ಜತೆಗೆ ಈಗ ಅಮೆರಿಕ ತನ್ನ ನೆಲದಲ್ಲಿ ವೈಮಾನಿಕ ದಾಳಿಯ ಮೂಲಕ ಉಗ್ರವಾದವನ್ನು ಮಟ್ಟಹಾಕಲ ಹೊರಟಿರುವುದು ಸುಲಭವಲ್ಲ. ಅದರ ಬದಲಾಗಿ ಅಮೆರಿಕದ ಸೈನಿಕರು ಬಳಸುವ ತಂತ್ರಜ್ಞಾನದ ಸಹಕಾರವನ್ನು ನಮಗೆ ನೀಡಿದರೆ ನಾವೇ ಉಗ್ರರನ್ನು ಮಣಿಸುತ್ತೇವೆ ಎಂಬ ಚಾಣಾಕ್ಷತನದ ಉತ್ತರವನ್ನೂ ಕೊಟ್ಟಿದೆ. |