ಮುಂಬೈ ಹತ್ಯಾಕಾಂಡಕ್ಕೆ ಭಾರತದ ಒಳಗೇ ಗಮನಾರ್ಹ ಬೆಂಬಲ ಸಿಕ್ಕಿದೆಯೆಂದು ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ತಿಳಿಸಿದ್ದಾರೆ. ತಮ್ಮ ರಾಷ್ಟ್ರದ ಕೋರ್ಟ್‌ನಲ್ಲಿ ಆರೋಪಿಗಳಾದವರಿಗೆ ಸೂಕ್ತ ಶಿಕ್ಷೆ ನೀಡುವ ಸಲುವಾಗಿ ಭಾರತದ ಸಹಕಾರ ಪಾಕಿಸ್ತಾನಕ್ಕೆ ಅಗತ್ಯವಾಗಿದೆ ಎಂದು ಜರ್ದಾರಿ ಹೇಳಿದರು.
'ಕೆಲವು ಭಯೋತ್ಪಾದಕರು ಪಾಕಿಸ್ತಾನದಲ್ಲಿ ಹುಟ್ಟಿರಬಹುದು. ಆದರೆ ಈ ಕಾರ್ಯಾಚರಣೆಯು ಅಂತಾರಾಷ್ಟ್ರೀಯವಾಗಿದ್ದು, ಭಾರತದೊಳಗೆ ಗಮನಾರ್ಹ ಬೆಂಬಲ ಸಿಕ್ಕಿದೆ' ಎಂದು ಹೇಳಿದರು.
ಮುಂಬೈನ ಶವಾಗಾರದಲ್ಲಿ ದೇಹಗಳನ್ನು ಇಟ್ಟಿರುವ 9 ಉಗ್ರರ ಬಗ್ಗೆ ಯಾವುದಾದರೂ ಮಾಹಿತಿ ಸಿಕ್ಕಿತೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.ಮುಂಬೈ ಭಯೋತ್ಪಾದನೆ ದಾಳಿಗಳ ತನಿಖೆಯಲ್ಲಿ ಪಾಕಿಸ್ತಾನದ ಸಾಕಷ್ಟು ಕೆಲಸ ಮಾಡುತ್ತಿಲ್ಲವೆಂಬ ಭಾರತದ ಆರೋಪ ಕುರಿತು ಪ್ರಶ್ನಿಸಿದಾಗ, ಭಾರತ ಸರ್ಕಾರ ನಮ್ಮ ಸಹಕಾರದ ಮಟ್ಟದ ಬಗ್ಗೆ ಅತೃಪ್ತಿ ಹೊಂದಿಲ್ಲವೆಂದು ಭಾವಿಸುವುದಾಗಿ ಹೇಳಿದರು.'ನಾವು ನೆರವಿನ ಪ್ರಸ್ತಾಪ ಮಾಡಿದ್ದೇವೆ ಮತ್ತು ನೆರವನ್ನೂ ನೀಡಿದ್ದೇವೆ.
ಮುಂಬೈ ದಾಳಿಯಲ್ಲಿ ಭಾಗಿಯಾದ ಸಂಘಟನೆಗಳಲ್ಲಿ ಗಣನೀಯ ಸಂಖ್ಯೆಯ ಬಂಧನಗಳನ್ನು ಮಾಡಿದ್ದೇವೆ 'ಎಂದು ಅವರು ಹೇಳಿದರು. ಆದರೆ ಈ ಆರೋಪಿಗಳಿಗೆ ನಮ್ಮ ಕೋರ್ಟ್‌ಗಳಲ್ಲಿ ಪರಿಮಾಣಕಾರಿ ಶಿಕ್ಷೆ ವಿಧಿಸಲು ಪ್ರಕರಣವನ್ನು ಸಿದ್ಧಗೊಳಿಸುವ ಬಗ್ಗೆ ಭಾರತದ ಸಹಕಾರ ಅಗತ್ಯವೆಂದು ಜರ್ದಾರಿ ನುಡಿದರು. |