ಬಾಗ್ದಾದ್ ಶಿಯ ಮುಸ್ಲಿಂ ಭಾಗದಲ್ಲಿ ಗುರುವಾರ ಸ್ಫೋಟಿಸಿದ ಬಾಂಬ್‌ಗೆ 7 ಜನರು ಅಸುನೀಗಿದ್ದು, ಕನಿಷ್ಠ 20 ಜನರು ಸತ್ತಿದ್ದಾರೆಂದು ಇರಾಕ್ ಪೊಲೀಸರು ಹೇಳಿದ್ದಾರೆ. ಶಿಯಾ ಮುಸ್ಲಿಮರ ಮುಖ್ಯಆರಾಧನಾ ಮಂದಿರದ ಬಳಿ ಕಧಾಮಿಯ ಶಾಪಿಂಗ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ.
ಹಿಂದಿನ ದಿನ ಇದೇ ಪ್ರದೇಶದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 9 ಜನರು ಸತ್ತಿದ್ದರು. ಕಳೆದ ಸೋಮವಾರ 34 ಜನರನ್ನು ಬಲಿತೆಗೆದುಕೊಂಡ ದಾಳಿ ಬಳಿಕ ಸರಣಿ ದಾಳಿಗಳು ಸಂಭವಿಸಿದ್ದು, 2003ರಿಂದೀಚೆಗೆ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದ ಹಿಂಸಾಚಾರ ಮತ್ತೆ ಗರಿಗೆದರಬಹುದೆಂಬ ಭಯ ಆವರಿಸಿದೆ.
ಈ ಸ್ಫೋಟದಲ್ಲಿ 23 ಜನರು ಗಾಯಗೊಂಡಿದ್ದು, ಚಿನ್ನಾಭರಣ ಮತ್ತು ಬಟ್ಟೆ ಅಂಗಡಿಗಳಿಂದ ತುಂಬಿದ್ದ ಕಾಲುಹಾದಿಯಲ್ಲಿ ಅಪ್ಪಳಿಸಿತೆಂದು ಪೊಲೀಸರು ಹೇಳಿದ್ದಾರೆ. ಪ್ಲ್ಯಾಸ್ಟಿಕ್ ಚೀಲವೊಂದರಲ್ಲಿ ಸ್ಫೋಟದ ಸಾಮಗ್ರಿಯನ್ನು ಇರಿಸಲಾಗಿತ್ತೆಂದು ಅವರು ಹೇಳಿದ್ದಾರೆ. ಶಿಯಾ ಮುಸ್ಲಿಮರ ಪವಿತ್ರ ಸ್ಥಳವಾದ ಇಮಾಮ್ ಮೌಸಾ ಅಲ್ ಕಝೀಮ್ ಸಮಾಧಿಗೆ 100 ಮೀ ದೂರದಲ್ಲಿ ಇದು ಸ್ಫೋಟಿಸಿದೆ. |