ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಲ್‌ಟಿಟಿಇ ಶರಣಾದರೆ ಪ್ರಜೆಗಳಾಗಿ ಪುನರ್ವಸತಿ: ರಾಜಪಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇ ಶರಣಾದರೆ ಪ್ರಜೆಗಳಾಗಿ ಪುನರ್ವಸತಿ: ರಾಜಪಕ್ಷೆ
ಸೇನೆಯ ಕೈಯಲ್ಲಿ ಸೋಲಿನ ಸರಮಾಲೆ ಎದುರಿಸಿದ ಎಲ್‌ಟಿಟಿಇ ಇನ್ನು ತಲೆ ಎತ್ತಲಾರದು ಎಂದು ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ವಿಶ್ವಾಸ ವ್ಯಕ್ತಪಡಿ ಸಿದ್ದಾರೆ. ಬಂಡುಕೋರರು ಸೇನೆಗೆ ಶರಣಾದರೆ ನಿಮ್ಮನ್ನು ಉತ್ತಮ ಪ್ರಜೆಗಳಾಗಿ ಪುನರ್ವಸತಿ ಕಲ್ಪಿಸುವುದಾಗಿ ರಾಜಪಕ್ಷೆ ಭರವಸೆ ನೀಡಿದ್ದಾರೆ.

ಶೇ. 99ರಷ್ಟು ಎಲ್‌ಟಿಟಿಇ, ಅದರ ನಾಯಕರು, ಕಾರ್ಯಕರ್ತರು ಮತ್ತು ಮ‌ೂಲಸೌಲಭ್ಯಗಳು ನಾಶವಾಗಿವೆ. ಎಲ್‌ಟಿಟಿಇ ಪುನಃ ತಲೆ ಎತ್ತಲು ಸಾಧ್ಯವೇ ಇಲ್ಲವೆಂದು ರಾಜಪಕ್ಷೆ ಹೇಳಿದ್ದಾರೆ. ಶ್ರೀಲಂಕಾದ ಸೇನಾಪಡೆ ಜಗತ್ತಿನಲ್ಲೇ ಶ್ರೇಷ್ಠವಾದ ಸೇನಾಪಡೆಗಳಲ್ಲಿ ಒಂದಾಗಿದ್ದು, ತಾವು ಅದರ ಮುಖ್ಯ ದಂಡಾಧಿಕಾರಿಯಾಗಿರುವುದಕ್ಕೆ ಹೆಮ್ಮೆಪಡುವುದಾಗಿ ಹೇಳಿದರು.

ಎಲ್‌ಟಿಟಿಇ ವಿರುದ್ಧ ಭದ್ರತಾಪಡೆಗಳ ವಿಜಯಗಳ ಸಾಧನೆ ಕುರಿತು ಪತ್ರಿಕೆಯೊಂದು ರಾಜಪಕ್ಷೆ ಪ್ರತಿಕ್ರಿಯೆ ಕೇಳಿದಾಗ ಅವರು ಉತ್ತರಿಸುತ್ತಿದ್ದರು.ಎಲ್‌ಟಿಟಿಇ ಬಿಟ್ಟು ಹೋದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಸಮರಕಣದಲ್ಲಿ ಪತ್ತೆಯಾಗಿವೆ ಎಂದು ರಾಜಪಕ್ಷೆ ತಿಳಿಸಿದರು.

ವಾಯವ್ಯ ಮನ್ನಾರ್‌ನಿಂದ ಈ ತಿಂಗಳಾಂತ್ಯದಲ್ಲಿ ಆರಂಭಿಸಲಾಗುವ ಅಭಿವೃದ್ಧಿ ಕೇಂದ್ರಗಳಲ್ಲಿ ಸಾವಿರಾರು ಜನರ ಪುನರ್ವಸತಿಗೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಏತನ್ಮಧ್ಯೆ ರಾಜಪಕ್ಷೆ ಸಮಾರಂಭವೊಂದರಲ್ಲಿ ಮಾತನಾಡುತ್ತಾ, 'ಉತ್ತರ ಮತ್ತು ಪೂರ್ವ ಭಾಗದಲ್ಲಿ ಮಾತ್ರ ಎಲ್‌ಟಿಟಿಇಗೆ ತೃಪ್ತಿಯಿರಲಿಲ್ಲ. ಅದರ ಕಾಲ್ಪನಿಕ ಈಳಂ ನಕ್ಷೆಯು ನೆಗೊಂಬೊ, ಬಾಡುಲ್ಲಾ ಮತ್ತು ಯಾಲಾಗೆ ವಿಸ್ತರಣೆಯಾಗಿತ್ತು' ಎಂದು ಹೇಳಿದರು.

ಕೊಲಂಬೊ ಬಳಿಯಿಂದ ಶ್ರೀಲಂಕಾದ ದಕ್ಷಿಣದವರೆಗೆ ದೊಡ್ಡ ಈಳಂ ರಾಜ್ಯದ ಸ್ಥಾಪನೆಗೆ ಪ್ರಭಾಕರನ್ ಮಹತ್ವಾಕಾಂಕ್ಷೆ ಹೊಂದಿದ್ದ ಎಂದು ಶ್ರೀಲಂಕಾ ಅಧ್ಯಕ್ಷರ ಸೋದರ ಮತ್ತು ರಕ್ಷಣಾ ಕಾರ್ಯದರ್ಶಿ ಗೋಟಬಾಯ ರಾಜಪಕ್ಷೆ ಇತ್ತೀಚೆಗೆ ತಿಳಿಸಿದ್ದರು. ಎಲ್‌ಟಿಟಿಟಿ ಅಗಾಧವಾಗಿ ನಿರ್ಮಿಸಿರುವ ನೌಕಾದಳ, ವಾಯುಪಡೆ ಮತ್ತು ಆತ್ಮಾಹುತಿ ದಳದ ಸಹಿತ ಭೂದಳವು ಎಲ್‌ಟಿಟಿಇ ಮಹತ್ವಾಕಾಂಕ್ಷೆಯ ಪ್ರತೀಕವಾಗಿದೆ ಎಂದು ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೊಮಾಲಿಯ ತೀರಕ್ಕೆ ಅಮೆರಿಕದ ಸಮರವಿಮಾನ
ಇರಾಕ್‌ನಲ್ಲಿ ಬಾಂಬ್ ದಾಳಿಗೆ 7 ಬಲಿ
ಉತ್ತರಕೊರಿಯ ರಾಕೆಟ್ ಉಡಾವಣೆಗೆ ನ್ಯಾಟೊ ಖಂಡನೆ
ಮುಂಬೈ ದಾಳಿಗಳಿಗೆ ಭಾರತದಲ್ಲೇ ಕುಮ್ಮಕ್ಕು: ಜರ್ದಾರಿ
ಉಗ್ರರನ್ನು ನಾವೇ ಸದೆಬಡಿಯುತ್ತೇವೆ: ಪಾಕ್
ಹಾಂಕಾಂಗ್‌ನಲ್ಲಿ ಬಿಗ್ ಬಿ ಪ್ರತಿಮೆ ಶೀಘ್ರ ಅನಾವರಣ