ಅತ್ಯಂತ ಟೀಕೆಗೆ ಗುರಿಯಾದ ಪಾಕಿಸ್ತಾನ ಸರ್ಕಾರ ಮತ್ತು ತಾಲಿಬಾನ್ ಉಗ್ರರ ನಡುವೆ ಶಾಂತಿ ಒಪ್ಪಂದವು ರದ್ದಾಗಿದೆಯೆಂದು ವರದಿಯೊಂದು ಹೇಳಿದೆ. ತೀವ್ರವಾದಿ ಇಸ್ಲಾಂ ಧರ್ಮಗುರು ಮತ್ತು ಟಿಎನ್‌ಎಸ್‌ಎಂ ಮುಖ್ಯಸ್ಥ ಸ್ವಾತ್‌ನಲ್ಲಿ ಶಾಂತಿ ಶಿಬಿರವನ್ನು ಮುಚ್ಚಿ ಆ ಪ್ರದೇಶದಿಂದ ಜಾಗಖಾಲಿ ಮಾಡಲು ನಿರ್ಧರಿಸಿದ್ದಾನೆ.
ಶಾಂತಿ ಒಪ್ಪಂದ ರದ್ದಾಗಿದ್ದರ ಫಲವಾಗಿ ರಕ್ತಪಾತ ಜರುಗಿದರೆ ಅಥವಾ ಕಾನೂನು ಸಮಸ್ಯೆಗಳುಂಟಾದರೆ ಪಾಕಿಸ್ತಾನ ಸರ್ಕಾರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸ್ವಾತ್‌ನಲ್ಲಿ ಶಾಂತಿ ಮರುಸ್ಥಾಪನೆಯಾದರೆ ಮಲಕಂಡ್ ವಿಭಾಗದಲ್ಲಿ ಶರಿಯತ್ ಕೋರ್ಟ್ ಸ್ಥಾಪನೆ ಒಪ್ಪಂದವು ವಾಯವ್ಯ ಗಡಿ ಪ್ರಾಂತ್ಯದ ಸರ್ಕಾರ ಮತ್ತು ಸೂಫಿ ಮಹಮದ್ ನಡುವೆ ಏರ್ಪಟ್ಟಿತ್ತು. ಆದರೆ ಫೆಡರಲ್ ಸರ್ಕಾರವು ಷರಿಯತ್ ಕೋರ್ಟ್ ಸ್ಥಾಪನೆ ಪರವಾಗಿಲ್ಲ ಎಂದು ಮಹಮದ್ ಹೇಳಿದ್ದಾರೆ.
ಎನ್‌ಡಬ್ಲ್ಯುಎಫ್‌ಪಿನಲ್ಲಿ ಸರ್ಕಾರಿ ಸ್ವಾಮ್ಯದ ಕೋರ್ಟ್‌ಗಳನ್ನು ಷರಿಯತ್ ವಿರೋಧಿ ಮತ್ತು ಇಸ್ಲಾಮಿಕ್ ವಿರೋಧಿ ಎಂದು ಅವನು ಖಂಡಿಸಿದ್ದ. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಚೌಧರಿ ಅವರು ಬಾಲಕಿಗೆ ಛಡಿಯೇಟು ನೀಡಿದ ಶಿಕ್ಷೆಯ ಬಗ್ಗೆ ಏಕಪಕ್ಷೀಯವಾಗಿ ಗಮನವಹಿಸಿದ್ದರು. ಸ್ವಾತ್ ಕಣಿವೆಯಲ್ಲಿ ಈ ಘಟನೆ ಬಗ್ಗೆ ತನಿಖೆಗೆ ಸಮಿತಿಯೊಂದನ್ನು ಕೂಡ ರಚಿಸಿದ್ದರು. |