ಬಂದೂಕುಧಾರಿಯೊಬ್ಬ ತನ್ನ ಪತ್ನಿ, ಪುತ್ರಿ ಮತ್ತು ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿ ಸ್ವತಃ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಿಯಾಮಿಯಲ್ಲಿ ವರದಿಯಾಗಿದ್ದು, ಅಮೆರಿಕಕ್ಕೆ ಆಘಾತಮೂಡಿಸಿದ ಇತ್ತೀಚಿನ ಹತ್ಯೆ-ಆತ್ಮಹತ್ಯೆಗಳ ಸರಣಿಯಲ್ಲಿ ಇತ್ತೀಚಿನದಾಗಿದೆ.
ಅಲಾಬಾಮಾದ ಮಾರ್ಗನ್ ಕೌಂಟಿಯಲ್ಲಿ ತನ್ನ ಪರಿತ್ಯಕ್ತ ಪತ್ನಿಯ ಜತೆ ವಾಸಿಸುತ್ತಿದ್ದ ಮನೆಯ ಬಳಿ ಕೆವಿನ್ ಗಾರ್ನರ್ ದೇಹ ಪತ್ತೆಯಾಗಿದೆ. ಇದಕ್ಕೂ ಮುನ್ನ ಗಾರ್ನರ್ ತನ್ನ ಪತ್ನಿ, ಪುತ್ರಿ, ಸೋದರಿ ಮತ್ತು ಅವರ ಸೋದರಳಿಯನನ್ನು ಗ್ರೀನ್‌ಹಿಲ್‌ನಲ್ಲಿ ಹತ್ಯೆ ಮಾಡಿದ್ದ. ಬುಧವಾರ ನಡೆಯಬೇಕಿದ್ದ ಗಾರ್ನರ್ ಮತ್ತು ಅವರ ಪತ್ನಿ ನಡುವೆ ವಿಚ್ಛೇದನದ ವಿಚಾರಣೆಗೆ ಮುನ್ನ ಈ ಹತ್ಯೆಗಳನ್ನು ಗಾರ್ನರ್ ಮಾಡಿದ್ದಾನೆ.
ಪರಿತ್ಯಕ್ತ ಪತ್ನಿಯ ಪರವಾಗಿ ಗಾರ್ನರ್ ಸೋದರಿ ವಿಚಾರಣೆಯಲ್ಲಿ ಸಾಕ್ಷ ನೀಡಲು ಸಿದ್ಧವಾಗಿದ್ದಳು. ಇದರಿಂದ ಉದ್ವೇಗಕ್ಕೀಡಾದ ಗಾರ್ನರ್ ಈ ಹತ್ಯೆ ನಡೆಸಿದ್ದಾನೆಂದು ಶಂಕಿಸಲಾಗಿದೆ. ಕಳೆದ ಕೆಲವು ವಾರಗಳಿಂದ ಸಾಮೂಹಿಕ ಮಾರಕ ಶೂಟಿಂಗ್‌ಗಳಿಂದ ಅಮೆರಿಕದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ. |