ಇಲ್ಲಿ ಕಳೆದ ಕೆಲವು ವಾರಗಳಿಂದ ಉಂಟಾಗಿರುವ ಭಾರೀ ನೆರೆಯಿಂದಾಗಿ ಅಪಾರ ಜೀವಹಾನಿ- ನಷ್ಟ ಸಂಭವಿಸಿದ್ದು, ಇದುವರೆಗೆ 54,000 ಮಂದಿಯನ್ನು ನೆರೆ ಪೀಡಿತ ಪ್ರದೇಶಗಳಿಂದ ಸುರಕ್ಷಿತ ಕಡೆ ಸ್ಥಳಾಂತರಿಸಲಾಗಿದೆ.
ನಮೀಬಿಯಾದ ಮೂರನೇ ಒಂದು ಭಾಗದಷ್ಟು ಜನ ತಮ್ಮ ಗ್ರಾಮಗಳಲ್ಲಿನ ಮನೆಗಳನ್ನು ಕಳೆದುಕೊಂಡಿದ್ದಾರೆ. ಅವರನ್ನು ಪುನರ್ವಸತಿ ಶಿಬಿರಗಳಿಗೆ ಸೇರಿಸಲಾಗಿದೆ ಎಂದು ಮಾನವೀಯ ವ್ಯವಹಾರಗಳ ಸಹಕಾರ ಸಮಿತಿ ತಿಳಿಸಿದೆ.
ಭಾರೀ ನೆರೆಯಿಂದಾಗಿ ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿದೆ. ಹಾಗಾಗಿ ಸುಮಾರು 350,000 ಜನ, ಅಂದರೆ ದಕ್ಷಿಣ ಆಫ್ರಿಕಾದ ಶೇಕಡಾ 17ರಷ್ಟು ಮಂದಿಯ ರಕ್ಷಣಾ ಕಾರ್ಯಗಳಿಗಾಗಿ ಅಡೆತಡೆಗಳುಂಟಾಗಿವೆ. ಆದರೂ ಹಲವಾರು ಸಂಘಟನೆಗಳು ಸಂತ್ರಸ್ತರನ್ನು ರಕ್ಷಿಸಲು ಅವಿರತ ಶ್ರಮವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಅಮೆರಿಕಾ, ಇಂಗ್ಲೆಂಡ್, ಜರ್ಮನಿ, ಯೂರೋಪಿಯನ್ ರಾಷ್ಟ್ರಗಳು ಸೇರಿದಂತೆ ಹಲವಾರು ದೇಶಗಳು ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿವೆ. ಬೀಳುತ್ತಿರುವ ಭಾರೀ ಮಳೆಯ ಕಾರಣ ಹಲವಾರು ನದಿಗಳು ತುಂಬಿ ಹರಿಯುತ್ತಿದ್ದು 1963ರ ನಂತರ ದಾಖಲೆ ಪ್ರಮಾಣದಲ್ಲಿ ನೆರೆ ಉಂಟಾಗಿದೆ. ಇದುವರೆಗೆ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
|