ಪ್ಯಾರಿಸ್: ಹೆಣ್ಣುಮಗುವಿನ ಭ್ರೂಣಹತ್ಯೆ ಭಾರತದಲ್ಲಿ ಮಾತ್ರವಲ್ಲ, ಚೀನಾದಲ್ಲೂ ಸಾಕಷ್ಟು ಅವ್ಯಾಹತವಾಗಿ ನಡೆಯುತ್ತಿದೆ. ಯಾಕೆಂದರೆ, ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಹೆಣ್ಣುಮಕ್ಕಳ ಸಂಖ್ಯೆಗಿಂತಲೂ 32 ಮಿಲಿಯನ್ ಗಂಡುಮಕ್ಕಳು ಹೆಚ್ಚಿದ್ದಾರೆ ಎಂಬ ಆತಂಕಕಾರಿ ಸತ್ಯ ಹೊರಬಿದ್ದಿದೆ. ಹೆಣ್ಣುಮಕ್ಕಳ ಜನನಕ್ಕಿಂತ ಗಂಡುಮಕ್ಕಳ ಜನನ ಸಹಜವಾಗಿಯೇ ಹೆಚ್ಚಿರುವುದು ಸತ್ಯವಾದರೂ, ಏಷ್ಯಾದ ರಾಷ್ಟ್ರಗಳು ಹಾಗೂ ಚೀನಾದಲ್ಲಿ ಹೆಣ್ಣು-ಗಂಡುಗಳ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸವಿದೆ ಎಂದೂ ಈ ವರದಿ ಹೇಳಿದೆ. |