ಕೊಟಾಬಾಟೋ: ದಕ್ಷಿಣ ಫಿಲಿಪೈನ್ಸ್‌ನಲ್ಲಿ ಶುಕ್ರವಾರ ಭಾರೀ ಶಕ್ತಿಯ ಬಾಂಬ್ ಸ್ಫೋಟಗೊಂಡಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಹಾಗೂ ಗಾಯಗಳೂ ಸಂಭವಿಸಿಲ್ಲ ಎಂದು ಪೊಲೀಸ್ ವರದಿಗಳು ತಿಳಿಸಿವೆ. ಗುಡ್‌ಫ್ರೈಡೆ ದಿನವಾದ್ದರಿಂದ ಅಂಗಡಿಗಳು ಮುಚ್ಚಿದ್ದರಿಂದ, ಕೇವಲ ಅಂಗಡಿಗೆ ಮಾತ್ರ ಹಾನಿಯಾಗಿದ್ದು ಬಿಟ್ಟರೆ ಪ್ರಾಣಕ್ಕೆ ಅಪಾಯವಾಗಿಲ್ಲ ಎಂದು ವರದಿಯಾಗಿದೆ. |