ವಾಷಿಂಗ್ಟನ್: ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಜಿ-20 ಶೃಂಗ ಸಭೆಯಲ್ಲಿ ಸೌದಿ ದೊರೆ ಅಬ್ದುಲ್ಲಾ ಅವಿಗೆ ತಲೆಬಾಗಿ ನಮಸ್ಕರಿಸಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ನಡತೆಗೆ ಅಮೆರಿಕದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಒಬಾಮಾ ಅವರು ದೊರೆಗೆ ತಲೆಬಾಗಿ ನಮಸ್ಕರಿಸುವ ಮೂಲಕ ಅಮೆರಕದ ಅಧ್ಯಕ್ಷೀಯ ಹುದ್ದೆಗೆ, ದೇಶದ ಸಂಪ್ರದಾಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಬಲಪಂಥೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಸ್ಲಾಂಗೆ ಅತೀವ ಗೌರವ ತೋರಿಸುವ ಸಲುವಾಗಿ ಒಬಾಮಾ ದೊರೆಗೆ ತಲೆಬಾಗಿರಬಹುದು ಎಂದು ಅಮೆರಿಕ ಪತ್ರಿಕೆಗಳೂ ಟೀಕಿಸಿವೆ. ಆದರೆ, ಒಬಾಮಾ ಅಧ್ಯಕ್ಷೀಯ ಕಚೇರಿ, ಒಬಾಮಾ ಅವರು ತಲೆ ಬಾಗಿ ನಮಸ್ಕರಿಸಿಲ್ಲ. ದೊರೆ ಒಬಾಮಾ ಅವರಿಗಿಂತ ಕುಳ್ಳಗಿದ್ದ ಕಾರಣ ಎತ್ತರವಿರುವ ಒಬಾಮಾ ದೊರೆಯ ಎರಡೂ ಕೈಗಳನ್ನು ಹಿಡಿದು ಹಸ್ತಲಾಘವ ಮಾಡುತ್ತಿರುವುದು ತುಸು ಬಗ್ಗಿದಂತೆ ಕಂಡಿದೆ ಎಂದು ಸ್ಪಷ್ಟಪಡಿಸಿದೆ. |