ಲಂಡನ್: ಲಂಡನ್ನಿನ ಭಾರತೀಯ ಹೈಕಮಿಷನರ್ ಕಚೇರಿಯ ಆವರಣದಲ್ಲಿರುವ ಜವಾಹರ್ ಲಾಲ್ ನೆಹರೂ ಅವರ ಲೋಹ ಪ್ರತಿಮೆಯನ್ನು ಕೆಡವಿದ ಘಟನೆ ನಡೆದಿದೆ. ಈ ಕೃತ್ಯವನ್ನು ತಮಿಳು ಪರ ಪ್ರತಿಭಟನಾಕಾರರು ಮಾಡಿರಬಹುದೆಂದು ಶಂಕಿಸಲಾಗಿದ್ದು, ಲಂಡನ್ ಪೋಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಭಾರತೀಯ ಹೈಕಮಿಷನರ್ ಕಚೇರಿ ಮಾತ್ರ ಪ್ರತಿಮೆ ಸಹಜವಾಗಿ ಬಿದ್ದಿದೆ ಎಂದು ಹೇಳಿಕೊಂಡಿದೆ. 20 ವರ್ಷಗಳ ಹಿಂದೆ ಸ್ಥಾಪಿಸಲಾದ ಈ ಪ್ರತಿಮೆ ಎರಡು ದಿನಗಳ ಹಿಂದೆ ಪೀಠದಿಂದ ಬೇರ್ಪಟ್ಟಿದೆ. |