ಲಂಡನ್ ಭಾರತೀಯ ಹೈಕಮೀಷನ್ ಹೊರಗೆ ಜವಾಹರಲಾಲ್ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ ಎಂಬ ವರದಿಗಳನ್ನು ಭಾರತೀಯ ರಾಜತಾಂತ್ರಿಕರು ನಿರಾಕರಿಸಿದ್ದಾರೆ. ವಿಗ್ರಹವು ಪೀಠದಿಂದ ಕೆಳಕ್ಕೆ ಬಿದ್ದು ಒಡೆದುಹೋಗಿದೆ ಎಂದು ಹೈಕಮೀಷನ್ ಪತ್ರಿಕಾ ವಕ್ತಾರೆ ಎಂ. ಸುಭಾಷಿನಿ ಸ್ಪಷ್ಟಪಡಿಸಿದ್ದಾರೆ. 'ವಿಗ್ರಹವು ಪೀಠದಿಂದ ಪ್ರತ್ಯೇಕಗೊಂಡಿದ್ದು, ಅದರಲ್ಲಿ ಅನುಮಾನ ಪಡುವಂತಹದ್ದು ಏನೂ ಇಲ್ಲವೆಂದು ವರದಿಗಾರರಿಗೆ ಸುಭಾಷಿನಿ ತಿಳಿಸಿದ್ದಾರೆ.
ಲಂಡನ್ ಮೂಲದ ಶ್ರೀಲಂಕಾ ತಮಿಳರು ಹೈಕಮೀಷನ್ ಹೊರಗೆ ಪ್ರತಿಭಟನೆ ನಡೆಸಿದ ಬಳಿಕ ವಿಗ್ರಹದ ತಲೆ ಕಡಿದ ಆರೋಪದ ಕುರಿತು ತನಿಖೆ ನಡೆಸಲಾಗುತ್ತಿದೆಯೆಂದು ಭಾರತದ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿದ್ದರ ಬಗ್ಗೆ ಯಾರಲ್ಲಾದರೂ ಸಾಕ್ಷ್ಯಾಧಾರವಿದ್ದರೆ ಅದನ್ನು ಕಳಿಸಲು ಅವರು ಮುಕ್ತರಾಗಿದ್ದಾರೆಂದು ತಿಳಿಸಿದ ಅವರು, ಈ ಪ್ರಕರಣವನ್ನು ಲಂಡನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ನುಡಿದರು. ತೆರೆದಿಟ್ಟ ಕಂಚಿನ ನೆಹರೂ ವಿಗ್ರಹವನ್ನು ಭಾರತೀಯ ಹೈಕಮೀಷನ್‌ನ ವೀಸಾ ಕಚೇರಿ ಹೊರಗೆ ಮುಕ್ತ ಸ್ಥಳದಲ್ಲಿ ಸ್ಥಾಪಿಸಲಾಗಿತ್ತು.
ಲಂಡನ್-ಲಂಡನ್ ಭಾರತೀಯ ಹೈಕಮೀಷನ್ ಹೊರಗೆ ಜವಾಹರಲಾಲ್ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ ಎಂಬ ವರದಿಗಳನ್ನು ಭಾರತೀಯ ರಾಜತಾಂತ್ರಿಕರು ನಿರಾಕರಿಸಿದ್ದಾರೆ. ವಿಗ್ರಹವು ಪೀಠದಿಂದ ಕೆಳಕ್ಕೆ ಬಿದ್ದು ಒಡೆದುಹೋಗಿದೆ ಎಂದು ಹೈಕಮೀಷನ್ ಪತ್ರಿಕಾ ವಕ್ತಾರೆ ಎಂ. ಸುಭಾಷಿಣಿ ಸ್ಪಷ್ಟಪಡಿಸಿದ್ದಾರೆ.
"ವಿಗ್ರಹವು ಪೀಠದಿಂದ ಪ್ರತ್ಯೇಕಗೊಂಡಿದ್ದು, ಅದರಲ್ಲಿ ಅನುಮಾನ ಪಡುವಂತಹದ್ದು ಏನೂ ಇಲ್ಲ" ಎಂದು ವರದಿಗಾರರಿಗೆ ಸುಭಾಷಿಣಿ ತಿಳಿಸಿದ್ದಾರೆ. ಲಂಡನ್ ಮೂಲದ ಶ್ರೀಲಂಕಾ ತಮಿಳರು ಹೈಕಮೀಷನ್ ಹೊರಗೆ ಪ್ರತಿಭಟನೆ ನಡೆಸಿದ ಬಳಿಕ ವಿಗ್ರಹದ ತಲೆ ಕಡಿದ ಆರೋಪವನ್ನು ಕುರಿತು ತನಿಖೆ ನಡೆಸಲಾಗುತ್ತಿದೆಯೆಂದು ಭಾರತದ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಅದನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿದ್ದರ ಬಗ್ಗೆ ಯಾರಲ್ಲಾದರೂ ಸಾಕ್ಷ್ಯಾಧಾರವಿದ್ದರೆ ಅದನ್ನು ಕಳಿಸಲು ಅವರು ಮುಕ್ತರಾಗಿದ್ದಾರೆಂದು ತಿಳಿಸಿದ ಅವರು, ಈ ಪ್ರಕರಣವನ್ನು ಲಂಡನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ನುಡಿದರು. ತೆರೆದಿಟ್ಟ ಕಂಚಿನ ನೆಹರೂ ವಿಗ್ರಹವನ್ನು ಭಾರತೀಯ ಹೈಕಮೀಷನ್‌ನ ವೀಸಾ ಕಚೇರಿ ಹೊರಗೆ ಮುಕ್ತ ಸ್ಥಳದಲ್ಲಿ ಸ್ಥಾಪಿಸಲಾಗಿತ್ತು. |