ಹಾಂಕಾಂಗ್ :ಚೀನಾದಲ್ಲಿ ಬೆಳೆಸುತ್ತಿರುವ ತರಕಾರಿ ಹಣ್ಣುಗಳಲ್ಲಿ ಅಧಿಕ ಕೀಟನಾಶಕ ಅಂಶ ಪತ್ತೆಯಾಗಿದ್ದು, ಇದು ಜೀವಕ್ಕೇ ಅಪಾಯಕಾರಿ ಎಂಬ ವಿಷಯ ಬಹಿರಂಗಗೊಂಡಿದೆ. ಅಂತಾರಾಷ್ಟ್ರೀಯ ಪರಿಸರ ಸಂಸ್ಥೆ ಗ್ರೀನ್‌ಪೀಸ್ ಈ ಆಘಾತಕಾರಿ ಅಂಶವನ್ನು ಬಯಲುಗೊಳಿಸಿದ್ದು, ಪ್ಪರಸ್ತುತ ಚೀನಾದಲ್ಲಿ ಅತಿ ಹೆಚ್ಚು ಕೀಟನಾಶಕ ಸಿಂಪಡಿಸಿ ತರಕಾರಿ ಬೆಳೆ ತೆಗೆಯಲಾಗುತ್ತಿದೆ. ಸರ್ಕಾರದಿಂದ ನಿಷೇಧವಾದ ಕೀಟನಾಶಕಗಳನ್ನೇ ರೈತರು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. |