ಎರಡು ದಿನಗಳ ಕಾಲದ ತಮಿಳು ಮತ್ತು ಸಿಂಹಳಹೊಸ ವರ್ಷಾಚರಣೆಯು ಸೋಮವಾರ ಆರಂಭವಾಗುವ ಹಿನ್ನೆಲೆಯಲ್ಲಿ ಮೂಲೆಗುಂಪಾದ ತಮಿಳು ಬಂಡುಕೋರರ ವಿರುದ್ಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಶ್ರೀಲಂಕಾ ಅಧ್ಯಕ್ಷ ಸರ್ಕಾರಿ ಪಡೆಗಳಿಗೆ ಆದೇಶ ನೀಡಿದ್ದಾರೆ.
ಈ ಕ್ರಮದಿಂದಾಗಿ ಯುದ್ಧವಲಯದಲ್ಲಿ ಸಿಕ್ಕಿಬಿದ್ದಿರುವ ಸಾವಿರಾರು ತಮಿಳು ನಾಗರಿಕರಿಂದ ಹೊಸ ವರ್ಷಾಚರಣೆಗೆ ಅವಕಾಶ ಲಭಿಸುತ್ತದೆ ಎಂದು ಮಹೀಂದ್ರ ರಾಜಪಕ್ಷೆ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಈ ಉದ್ದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ವರ್ಷದಲ್ಲಿ ಕಾರ್ಯಾಚರಣೆಯನ್ನು ರಕ್ಷಣಾತ್ಮಕ ಸ್ವರೂಪಕ್ಕೆ ನಿರ್ಬಂಧಿಸಬೇಕೆಂದು ಅಧ್ಯಕ್ಷರು ಸೇನಾಪಡೆಗಳಿಗೆ ಆದೇಶ ನೀಡಿದ್ದಾರೆ.
ದ್ವೀಪದ ಈಶಾನ್ಯಕ್ಕೆ ಕರಾವಳಿ ಕಾಡಿನ ಸಣ್ಣದಾದ ಜಾಗಕ್ಕೆ ಗೆರಿಲ್ಲಾಗಳನ್ನು ದೂಡಿರುವ ಭದ್ರತಾಪಡೆಗಳಿಗೆ ಎಲ್‌ಟಿಟಿಇ ಶರಣಾಗಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸಬೇಕೆಂಬ ಕರೆಯನ್ನು ಅವರು ಪುನರುಚ್ಚರಿಸಿದರು. ಈ ಋತುಮಾನದ ನಿಜವಾದ ಮನೋಭಾವನೆಯಲ್ಲಿ ತನ್ನ ಮಿಲಿಟರಿ ಸೋಲನ್ನು ಒಪ್ಪಿಕೊಳ್ಳುವುದು ಎಲ್‍ಟಿಟಿಗೆ ಈಗ ಸಕಾಲ ಎಂದು ಹೇಳಿಕೆ ತಿಳಿಸಿದ್ದು, ಎಲ್‌ಟಿಟಿಇ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಕಾಯಮ್ಮಾಗಿ ತ್ಯಜಿಸಬೇಕೆಂದು ಆಗ್ರಹಿಸಿದರು. ಅಧ್ಯಕ್ಷರ ಹೇಳಿಕೆಗೆ ವ್ಯಾಘ್ರಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಾವು ಹತ್ತಾರು ಸಾವಿರ ತಮಿಳು ನಾಗರಿಕರನ್ನು ಮಾನವ ಕವಚದಂತೆ ಹಿಡಿದಿಟ್ಟಿರುವ ವರದಿಗಳನ್ನು ಕೂಡ ಅದು ನಿರಾಕರಿಸಿದೆ. |