ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೊಮಾಲಿ ಕಡಲ್ಗಳ್ಳರಿಂದ ಮುಯ್ಯಿಗೆ ಮುಯ್ಯಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೊಮಾಲಿ ಕಡಲ್ಗಳ್ಳರಿಂದ ಮುಯ್ಯಿಗೆ ಮುಯ್ಯಿ
ಅಮೆರಿಕದ ನೌಕಾಪಡೆ ರಕ್ಷಕರು ರಾತ್ರಿವೇಳೆ ದಿಟ್ಟ ಆಕ್ರಮಣ ನಡೆಸಿ ಅಮೆರಿಕದ ನಾವೆಯ ಕ್ಯಾಪ್ಟನ್‌ರನ್ನು ಬಿಡುಗಡೆ ಮಾಡಿ ಮ‌ೂವರು ಕಡಲ್ಗಳ್ಳರನ್ನು ಗುಂಡಿಕ್ಕಿ ಕೊಂದಿದ್ದರಿಂದ ಕಡಲ್ಗಳ್ಳರು ರೋಷತಪ್ತರಾಗಿದ್ದಾರೆ. ತಮ್ಮ ಮ‌ೂರು ಸಹವರ್ತಿಗಳ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ನುಡಿದಿದ್ದಾರೆ. ಸುಮಾರು 5 ದಿನಗಳವರೆಗೆ ಹಿಂದುಮಹಾಸಾಗರದಲ್ಲಿ ತೇಲುತ್ತಿದ್ದ ಜೀವರಕ್ಷಕ ದೋಣಿಯಿಂದ ಫಿಲಿಪ್ಸ್ ಅವರನ್ನು ನೌಕಾದಳವು ಪಾರುಮಾಡಿತ್ತು.

ನಮ್ಮನ್ನು ನಡೆಸಿಕೊಂಡ ರೀತಿಯಲ್ಲೇ ಪ್ರತಿಯೊಂದು ರಾಷ್ಟ್ರವನ್ನು ಕಾಣುವುದಾಗಿ ಗ್ರೀಕ್ ಹಡಗನ್ನು ಹಿಡಿದಿಟ್ಟಿರುವ ಅಬ್ದುಲ್ಲಾಹಿ ಲಾಮಿ ತಿಳಿಸಿದ್ದಾನೆ. "ಭವಿಷ್ಯದಲ್ಲಿ ಅಮೆರಿಕ ಶೋಕಾಚರಣೆ ಮತ್ತು ರೋದನ ಮಾಡುತ್ತಾ ಕಾಲಕಳೆಯುತ್ತದೆ. ನಮ್ಮ ಜನರ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ" ಅವನು ಹೇಳಿದ್ದಾನೆ. ಆದರೆ ಸೇಡು ತೀರಿಸಿಕೊಳ್ಳುವ ವಿಧಾನದ ಬಗ್ಗೆ ಹೆಚ್ಚಿನ ವಿವರ ಸ್ಪಷ್ಟವಾಗಿಲ್ಲ. ಅಪಹರಿಸಿದ ಹಡಗುಗಳಲ್ಲಿ ಒತ್ತೆಸೆರೆಯಲ್ಲಿರುವ ನೂರಾರು ವಿದೇಶಿ ಪೌರರನ್ನು ಹತ್ಯೆ ಮಾಡುವ ಮ‌ೂಲಕ ಸೇಡು ತೀರಿಸಿಕೊಳ್ಳಬಹುದೆಂಬ ಶಂಕೆ ವ್ಯಕ್ತವಾಗಿದೆ.

ಇಷ್ಟು ದಿನ ಹಡಗುಗಳನ್ನು ಕೈವಶ ಮಾಡಿಕೊಳ್ಳುತ್ತಿದ್ದ ಲಕ್ಷಾಂತರ ಡಾಲರ್ ಒತ್ತೆಹಣ ಎಣಿಸುತ್ತಿದ್ದ ಕಡಲ್ಗಳ್ಳರಿಗೆ ಅಮೆರಿಕದ ಕಾರ್ಯಾಚರಣೆ ದೊಡ್ಡ ಪೆಟ್ಟು ಕೊಟ್ಟಿದೆ. ಜಗತ್ತಿನ ಅತ್ಯಂತ ಅಪಾಯಕಾರಿ ವಲಯವಾಗಿ ಸೊಮಾಲಿಯ ತೀರದ ಜಲಮಾರ್ಗಗಳು ಮತ್ತು ಅಡೆನ್ ಕೊಲ್ಲಿ ಪರಿವರ್ತನೆಯಾಗಿದ್ದು, ಕಡಲ್ಗಳ್ಳರ ಬೆದರಿಕೆಯು ಅಮೆರಿಕದ ದಾಳಿಯಿಂದ ಶಮನಗೊಳ್ಳುವ ನಿರೀಕ್ಷೆಯಿಲ್ಲ
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಂಕಾ: ಹೊಸ ವರ್ಷಾಚರಣೆಗಾಗಿ ಕದನವಿರಾಮ
ಲಂಡನ್‌ನಲ್ಲಿ ಲಕ್ಷ ತಮಿಳರ ಉಪವಾಸ ಸತ್ಯಾಗ್ರಹ
ಚೀನಾದ ತರಕಾರಿಗಳಲ್ಲಿ ವಿಷಕಾರಿ ಕೀಟನಾಶಕ
ಲಾಹೋರ್ ದಾಳಿಯಲ್ಲಿ ಭಾರತದ ಕೈವಾಡವಿಲ್ಲ
ಥೈಲ್ಯಾಂಡ್‌ನಲ್ಲಿ ತುರ್ತುಪರಿಸ್ಥಿತಿ ಹೇರಿಕೆ
ರಸ್ತೆ ಅಪಘಾತದಲ್ಲಿ ಮ‌ೂವರು ಎನ್‌ಆರ್‌ಐಗಳ ಸಾವು