ಶ್ರೀಲಂಕಾ ಸೇನೆಯ ಮಿಲಿಟರಿ ಕಾರ್ಯಾಚರಣೆಯಿಂದ ಸೋಲಿನ ಸರಮಾಲೆ ಅನುಭವಿಸಿ ಹತಾಶೆಯ ಸ್ಥಿತಿಯಲ್ಲಿರುವ ತಮಿಳು ವ್ಯಾಘ್ರಗಳು ಭಾನುವಾರ ಇಬ್ಬರು ಮಕ್ಕಳು ಸೇರಿದಂತೆ 6 ಜನರನ್ನು ಗುಂಡಿಕ್ಕಿ ಹತ್ಯೆಮಾಡಿದ್ದಾರೆಂದು ಆರೋಪಿಸಲಾಗಿದೆ.
ತಮ್ಮ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಎಲ್‌ಟಿಟಿಇ ಈ ದುಷ್ಕೃತ್ಯಕ್ಕೆ ಇಳಿದಿದೆಯೆಂದು ಮಿಲಿಟರಿ ತಿಳಿಸಿದೆ. ಬಟ್ಟಾಲಾ ಪ್ರದೇಶದ ಮಹಾಗೋಡಯಾಯ ಗ್ರಾಮದ ರೈತರ ಮೇಲೆ ಎಲ್‌ಟಿಟಿಇ ಕಾರ್ಯಕರ್ತರು ದಾಳಿ ನಡೆಸುತ್ತಿದ್ದು, ಇಬ್ಬರು ಮಕ್ಕಳು ಸೇರಿದಂತೆ 6 ಜನರನ್ನು ಹತ್ಯೆ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗರಿಕರಿಂದ ತುಂಬಿದ 20 ಚದರಕಿಮೀ ಪ್ರದೇಶದೊಳಕ್ಕೆ ಎಲ್‌ಟಿಟಿಇಯನ್ನು ಭದ್ರತಾ ಪಡೆಗಳು ದೂಡಿವೆ. ತಮಿಳು ಮತ್ತು ಸಿಂಹಳ ನೂತನ ವರ್ಷದ ದೃಷ್ಟಿಯಿಂದ ಯುದ್ಧವಲಯದಿಂದ ನಾಗರಿಕರು ತಪ್ಪಿಸಿಕೊಳ್ಳುವುದಕ್ಕಾಗಿ ಶ್ರೀಲಂಕಾ ಸರ್ಕಾರ ಕಾರ್ಯಾಚರಣೆಗೆ ಎರಡು ದಿನಗಳ ಕಾಲದ ವಿರಾಮ ಘೋಷಿಸಿದೆ. |