ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮಲಸಹೋದರ ಕಳೆದ ನವೆಂಬರ್‌ನಲ್ಲಿ ಬರ್ಕ್‌ಶೈರ್‌ನಲ್ಲಿ ಯುವತಿಯರ ಗುಂಪೊಂದರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆತನಿಗೆ ಬ್ರಿಟನ್ ವೀಸಾ ನಿರಾಕರಿಸಲಾಗಿದೆ.
ಸಾಮ್ಸನ್ ಒಬಾಮಾ ತನ್ನ ಸೋದರ ಅಮೆರಿಕದ ಅಧ್ಯಕ್ಷಗಿರಿಗೇರುವ ಐತಿಹಾಸಿಕ ಉದ್ಘಾಟನೆಯಲ್ಲಿ ಭಾಗವಹಿಸುವ ಸಲುವಾಗಿ ಬ್ರಿಟನ್ ಮಾರ್ಗವಾಗಿ ವಾಷಿಂಗ್ಟನ್‌ನತ್ತ ತೆರಳಿದ್ದರು. ಈಸ್ಟ್ ಮಿಡ್‌ಲ್ಯಾಂಡ್ಸ್ ವಿಮಾನನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಿಂದ ತಪಾಸಣೆಗೆ ಒಳಗಾದಾಗ ಲೈಂಗಿಕ ದೌರ್ಜನ್ಯದ ಪ್ರಕರಣ ಬೆಳಕಿಗೆ ಬಂತು.
ಸ್ಯಾಮ್ಸನ್ 13ರ ಪ್ರಾಯದ ಬಾಲಕಿ ಸೇರಿದಂತೆ ಯುವತಿಯರ ಗುಂಪಿನ ಮೇಲೆ ಲೈಂಗಿಕ ಹಲ್ಲೆಗೆ ಯತ್ನಿಸಿದ್ದರಿಂದ ಬ್ರಿಟನ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದನ್ನು ಉನ್ನತ ತಂತ್ರಜ್ಞಾನದ ದತ್ತಾಂಶವು ಬಹಿರಂಗಪಡಿಸಿತು, ಸಾಮ್ಸನ್ ಬೆರಳಚ್ಚು ಪರೀಕ್ಷೆಗಳನ್ನು ಮತ್ತು ವಿವರಗಳನ್ನು ಪಡೆದಿದ್ದರೂ ಯಾವುದೇ ಆರೋಪ ಹೊರಿಸಲಿಲ್ಲ. ಸಾಮ್ಸನ್ ವಿವರಗಳು ಗೃಹಕಚೇರಿಯ ನೂತನ ದತ್ತಾಂಶ ಮತ್ತು ಬಯೋಮೆಟ್ರಿಕ್ ವಿವರಗಳಲ್ಲಿ ದಾಖಲಾಗಿತ್ತು. |