ವಾಯವ್ಯ ಪೋಲೆಂಡ್‌ನಲ್ಲಿ ನಿರ್ಗತಿಕರ ವಸತಿನಿಲಯವೊಂದು ಅಗ್ನಿಗಾಹುತಿಯಾದ್ದರಿಂದ ಸುಮಾರು 17 ಜನರು ಅಸುನೀಗಿದ್ದಾರೆಂದು ಅಗ್ನಿಶಾಮಕ ಸೇವೆಯ ವಕ್ತಾರ ತಿಳಿಸಿದ್ದಾರೆ.
ಕಮೇನ್ ಪೊಮೋರ್‌ಸ್ಕಿಯ ಮೂರು ಮಹಡಿಗಳ ಕಟ್ಟಡದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿದ್ದರಿಂದ 17 ಜನರು ಸತ್ತಿದ್ದು, ಇನ್ನೂ 20 ಜನರು ಆಸ್ಪತ್ರೆಯಲ್ಲಿದ್ದಾರೆಂದು ವಕ್ತಾರ ಪಾವೆಲ್ ಫ್ರಾಟ್‌ಜ್ಯಾಕ್ ತಿಳಿಸಿದ್ದಾರೆ. ಅಗ್ನಿಶಾಮಕದಳ ಆಗಮಿಸುವುದಕ್ಕೆ ಮುಂಚಿತವಾಗಿ ಬೆಂಕಿಯ ಕೆನ್ನಾಲಿಗೆಯಿಂದ ಉರಿಯುತ್ತಿದ್ದ ಕಟ್ಟಡವನ್ನು ತೊರೆದವರಲ್ಲಿ ಬಹುತೇಕ ಮಂದಿ ಗಾಯಗೊಂಡಿದ್ದರು.
ಗಾಯಗೊಂಡ ಅನೇಕ ಮಂದಿ ಕಿಟಕಿಗಳಿಂದ ಹಾರಿದ್ದರಿಂದ ಮೂಳೆ ಮುರಿತ ಉಂಟಾಗಿದೆ. ಆಶ್ರಯಧಾಮದಲ್ಲಿ ಕನಿಷ್ಠ 77 ಜನರಿದ್ದು ಭಾನುವಾರದಿಂದ ಸೋಮವಾರದ ತನಕ ಬೆಂಕಿ ಹೊತ್ತಿಉರಿಯತೊಡಗಿತು. ಅಗ್ನಿಶಾಮಕ ದಳವು ಮುಂಜಾನೆ 8.30ರ ವೇಳೆ ಕೂಡ ಅವಶೇಷಗಳಲ್ಲಿ ಹುಡುಕುತ್ತಿದ್ದುದು ಕಂಡುಬಂತು. |