ವಾಯವ್ಯ ಗಡಿ ಪ್ರಾಂತ್ಯದ ಮಲಕಾಂಡ್ ವಿಭಾಗದಲ್ಲಿ ಶರಿಯತ್ ಕಾನೂನು ಜಾರಿಯನ್ನು ಮೂಲಭೂತವಾದಿ ಧರ್ಮಗುರು ಸುಫಿ ಮಹಮ್ಮದ್ ನೇತೃತ್ವದ ಟಿಎನ್‌ಎನ್‌ಎಂ ಮತ್ತು ತೆಹ್ರಿಕ್ ಐ ತಾಲಿಬಾನ್ ಸ್ವಾಗತಿಸಿದ್ದು, ದೇಶದ ಇತರೆ ಭಾಗಗಳಲ್ಲಿ ಷರಿಯತ್ ಕಾನೂನು ಜಾರಿಗೆ ಹೋರಾಟ ಮುಂದುವರಿಯುತ್ತದೆಂದು ಹೇಳಿದ್ದಾನೆ.
ಎನ್‌ಡಬ್ಲ್ಯುಎಫ್‌ಪಿಯ ಕೆಳ ದಿರ್ ಪ್ರದೇಶದ ತವರುಜಿಲ್ಲೆ ಮೈಡಾನ್‌ನಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಸೂಫಿ ಮಹಮ್ಮದ್, ತಾಲಿಬಾನ್ ಮತ್ತು ಟಿಎನ್‌ಎಸ್‌ಎಂ, ಸರ್ಕಾರದ ಜತೆ ಷರಿಯತ್ ಕಾನೂನು ಜಾರಿಗೆ ಕೆಲಸ ಮಾಡಿ ಆ ಪ್ರದೇಶದಲ್ಲಿ ಶಾಂತಿ ಕಾಯ್ದುಕೊಳ್ಳುವುದಾಗಿ ತಿಳಿಸಿದ್ದಾನೆ.
ಷರಿಯತ್ ಜಾರಿ ಮತ್ತು ಕಾಜಿ ಕೋರ್ಟ್‌ಗಳ ಸ್ವಾತಂತ್ರ್ಯಕ್ಕೆ ಸರ್ಕಾರ ಇಡುವ ಹೆಜ್ಜೆಗಳ ಮೇಲೆ ತಮ್ಮ ಪಕ್ಷ ಕಣ್ಣಿಡುವುದೆಂದೂ ಸೂಪಿ ಮಹಮದ್ ತಿಳಿಸಿದ್ದಾನೆ. ಮಿಲಿಟರಿ ಮತ್ತು ಸರ್ಕಾರಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಸೂಫಿ ಹೇಳಿದ್ದು, 'ನಮ್ಮ ಹೋರಾಟದಿಂದ ಯಶಸ್ಸು ಸಾಧಿಸಿದ್ದೇವೆ. ನಾವೀಗ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ' ಎಂದು ಹೇಳಿದ್ದಾನೆ. ಸಶಸ್ತ್ರ ಹೋರಾಟಗಾರರಿಗೆ ಶಸ್ತ್ರಗಳನ್ನು ಒಪ್ಪಿಸುವಂತೆ ಸೂಫಿ ಮಹಮದ್ ಆದೇಶ ನೀಡಿದ್ದು, ತಮ್ಮ ಸಹಕಾರವು ಷರಿಯತ್ ಕಾನೂನು ಶತಾಯಗತಾಯ ಜಾರಿಯ ಮೇಲೆ ಅವಲಂಬಿತವಾಗಿದೆಯೆಂದು ಹೇಳಿದ್ದಾನೆ. ಅಜ್ಞಾತ ಸ್ಥಳವೊಂದರಿಂದ ಮಾತನಾಡಿದ ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ಪಾಕಿಸ್ತಾನದಾದ್ಯಂತ ಷರಿಯತ್ ಕಾನೂನು ಜಾರಿ ಮಾಡುವ ಸೂಫಿ ಮಹಮದ್ ಕರೆಗೆ ದನಿಗೂಡಿಸಿದ್ದಾನೆ.
ಸೂಫಿ ಮಹಮದ್ ಶಸ್ತ್ರಾಸ್ತ್ರಗಳನ್ನು ಒಪ್ಪಿಸಬೇಕೆಂಬ ಕರೆಗೆ ಖಾನ್ ವೈರುದ್ಯದ ಹೇಳಿಕೆ ನೀಡಿದ್ದಾನೆ. ತಾಲಿಬಾನ್ ಶಸ್ತ್ರಗಳನ್ನು ತ್ಯಜಿಸುವುದಿಲ್ಲ. ಶಸ್ತ್ರಗಳನ್ನು ತ್ಯಜಿಸುವುದು ಶಾಂತಿ ಒಪ್ಪಂದದ ಭಾಗವಾಗಿಲ್ಲ ಎಂದು ಹೇಳಿದ್ದಾನೆ. |