ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕದಲ್ಲಿ ತಿಗಣೆಗಳ ಕಾಟ ನಿವಾರಣೆಗೊಂದು ಸಮಾವೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕದಲ್ಲಿ ತಿಗಣೆಗಳ ಕಾಟ ನಿವಾರಣೆಗೊಂದು ಸಮಾವೇಶ
ಅಮೆರಿಕ ಸರ್ಕಾರ ಪ್ರಪ್ರಥಮ ಬಾರಿಗೆ ಸಮಾವೇಶವೊಂದನ್ನು ಆಯೋಜಿಸಿದೆ. ಅಮೆರಿಕದಲ್ಲಿ ಸಮಾವೇಶವೇ ನಡೆದಿಲ್ಲವೆಂದು ಇದರ ಅರ್ಥವಲ್ಲ. ಅಮೆರಿಕ ಆಯೋಜಿಸಿರುವುದು ವಿಶಿಷ್ಠವಾದ ತಿಗಣೆ ಸಮಾವೇಶ. ರಕ್ತ ಹೀರುವ ಕೀಟಗಳು ಅಮೆರಿಕದ ಮೇಲೆ ಮರುದಾಳಿ ನಡೆಸಿರುವುದು ತಲೆನೋವಾಗಿ ಪರಿಣಮಿಸಿದೆ.

ದಶಕಗಳ ಹಿಂದೆಯೇ ತಿಗಣೆಗಳನ್ನು ಅಕ್ಷರಶಃ ಮ‌ೂಲೋತ್ಪಾಟನೆ ಮಾಡಲಾಗಿದ್ದರೂ, ಅನೇಕ ನಗರಗಳ ವಸತಿನಿಲಯಗಳು, ಆಸ್ಪತ್ರೆಗಳು ಮತ್ತು ಹೊಟೆಲ್ ಕೋಣೆಗಳಲ್ಲಿ ತಿಗಣೆಗಳು ಮರುಪ್ರವೇಶ ಪಡೆದಿವೆ. ಹಾಸಿಗೆಗಳು, ಸೋಫಾಗಳು ಮತ್ತು ಶೀಟುಗಳನ್ನು ಆಶ್ರಯತಾಣವಾಗಿ ಮಾಡಿಕೊಳ್ಳುವ ತಿಗಣೆಗಳು ರಾತ್ರಿ ವೇಳೆ ಸುಖನಿದ್ರೆಗೆ ಜಾರುವ ಗ್ರಾಹಕರನ್ನು ಬಲಿಪಶು ಮಾಡಿ ಅವರ ನಿದ್ರೆ ಕೆಡಿಸುತ್ತವೆ. ತಿಗಣೆಗಳು ರೋಗಕಾರಕವಲ್ಲದಿದ್ದರೂ ಕಚ್ಚಿಸಿಕೊಂಡರೆ ಮೈಕೈಯಲ್ಲಿ ನವೆ ಉಂಟಾಗಿ ಬಾತುಕೊಳ್ಳುತ್ತದೆಂದು ಕೆಲವರು ದೂರಿದ್ದಾರೆ.

ಮನೆಮಾಲೀಕರು, ಹೊಟೆಲ್ ಮಾಲೀಕರು ಮತ್ತು ವಸತಿ ಪ್ರಾಧಿಕಾರದಿಂದ ದಿನೇ ದಿನೇ ದೂರುಗಳು ಬರತೊಡಗಿದ್ದರಿಂದ ಅಮೆರಿಕದ ಪರಿಸರ ರಕ್ಷಣೆ ಏಜೆನ್ಸಿ ಎರಡು ದಿನಗಳ ತಿಗಣೆ ನಿರ್ಮೂಲನಾ ಸಮಾವೇಶ ಏರ್ಪಡಿಸಿ ಪರಿಹಾರೋಪಾಯ ಕುರಿತು ಚಿಂತನಮಂಥನ ನಡೆಸಲಿದೆ. ಎರಡನೇ ಮಹಾಯುದ್ಧಕ್ಕೆ ಮುಂಚಿತವಾಗಿ ತಿಗಣೆಗಳು ಅಧಿಕ ಸಂಖ್ಯೆಯಲ್ಲಿ ಕಂಡುಬಂದಿತ್ತು. ಅಂತಾರಾಷ್ಟ್ರೀಯ ಪ್ರವಾಸ, ವಲಸೆ ಮತ್ತು ಕೀಟ ನಿಯಂತ್ರಣದಲ್ಲಿ ಬದಲಾವಣೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ತಿಗಣೆಗಳ ಕಾಟ ಹೆಚ್ಚಲು ಕೊಡುಗೆ ಸಲ್ಲಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರಿಂದ ಸಿಖ್ಖರ ಮನೆಗಳ ಸ್ವಾಧೀನ
ಸೂಕಿ ಬಿಡುಗಡೆಗೆ ಅಮೆರಿಕದ ಮಹಿಳಾ ಸೆನೆಟರುಗಳ ಒತ್ತಾಯ
ಸಿಖ್ ಗಡ್ಡ, ಮೀಸೆ ಬೋಳಿಸಿದ್ದಕ್ಕೆ 20,000 ಡಾಲರ್ ದಂಡ
ಪಾಕ್‌ನಾದ್ಯಂತ ಷರಿಯತ್ ಕಾನೂನು ಜಾರಿ: ತಾಲಿಬಾನ್
ವಿಶ್ವದ ಪ್ರಥಮ ತದ್ರೂಪಿ ಒಂಟೆ ದುಬೈನಲ್ಲಿ ಜನನ
ಇರಾನ್‌: ಪತ್ರಕರ್ತೆ ವಿರುದ್ಧ ಬೇಹುಗಾರಿಕೆ ಆರೋಪ