ನ್ಯೂಯಾರ್ಕ್: ವ್ಯಾನಿಟಿ ಫೇರ್ ಪತ್ರಿಕೆ ವಿಶ್ವದ ಸುರಸುಂದರಿಗಾಗಿ ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ 33ರ ಹರೆಯದ ಏಂಜಲೀನಾ ಜೂಲಿ ಆಯ್ಕೆಯಾಗಿದ್ದಾರೆ. ಪತ್ರಿಕೆ ವಿಶ್ವದಾದ್ಯಂತ 19 ಮಹಿಳೆಯರನ್ನು ಸಮೀಕ್ಷೆಗೆ ಆಯ್ಕೆ ಮಾಡಿತ್ತು. ಸ್ಲಂಡಾಗ್ ಚಿತ್ರದ ಫ್ರೀದಾ ಪಿಂಟೋ ಈ ಪಟ್ಟಿಯಲ್ಲಿದ್ದ ಏಕೈಕ ಭಾರತೀಯ ಮಹಿಳೆ. ಫ್ರೀದಾಗೆ ಕೇವಲ ಶೇ.2ರಷ್ಟು ಮಾತ್ರ ಮತಗಳು ಒಲಿದಿದ್ದರಿಂದ ಸುಂದರಿ ಪಟ್ಟ ಸಿಗಲಿಲ್ಲ. ಆದರೂ ಆಯ್ಕೆ ಪಟ್ಟಿಯಲ್ಲಿದ್ದ ಕ್ಲಾರಾ, ಬ್ರೂನಿ, ಕೇಟ್ ಮೋಸ್, ಗಿನೆತ್ ಪಾಲ್ಟ್ರೋ ಮತ್ತಿತರರಿಗಿಂತ ಪಿಂಟೋ ಮುಂದಿದ್ದರು. |