ಕಠ್ಮಂಡು: ಸನ್ಯಾಸ ಸ್ವೀಕರಿಸಿದವರು ಸಾತ್ವಿಕ ಆಹಾರ ಸೇವಿಸುತ್ತಾರೆ ಎಂಬುದು ನಂಬಿಕೆಯಾದರೂ, ಕಠ್ಮಂಡುವಿನ ಪರ್ವತಗಳ ತಪ್ಪಲಿನಲ್ಲಿರುವ ಬೌದ್ಧ ಭಿಕ್ಷುಗಳಿಗೆ ಅಣಬೆ ಪಿಜ್ಜಾ, ಕೋಕಾಕೋಲಾ ಅಂದರೆ ಬಹಳ ಪ್ರೀತಿಯಂತೆ. ಜತೆಗೆ ಬಾಲಿವುಡ್ ಸೂಪರ್ ಸ್ಟಾರ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ನೆಚ್ಚಿನ ನಟನಂತೆ. ಈ ಬೌದ್ಧ ಭಿಕ್ಷುಗಳು ಫಾಸ್ಟ್‌ಫುಡ್ ವಿರೋಧಿಗಳಲ್ಲ. ಬಲವಂತವಾಗಿ ಯಾವುದನ್ನೂ ಹೇರಬಾರದು ಎಂಬುದು ಅವರ ನಂಬಿಕೆ. ಪಿಜ್ಜಾ ತಿನ್ನಬೇಡಿ ಅಂತ ಬಲವಂತವಾಗಿ ಯಾಕೆ ಹೇಳಬೇಕು. ಇದೆಲ್ಲ ಅವರವರ ಅಭಿರುಚಿಗೆ ಬಿಟ್ಟದ್ದು ಎನ್ನುತ್ತಾರೆ ಈ ಧರ್ಮಗುರುಗಳು. |