ಶ್ರೀಲಂಕಾದಲ್ಲಿ ತಮಿಳು ವ್ಯಾಘ್ರ ಬಂಡುಕೋರರು ನಾಗರಿಕರನ್ನು ಮಾನವ ಕವಚದಂತೆ ಬಳಸುತ್ತಿದ್ದು, ಇದರಿಂದಾಗಿ ಸಂಘರ್ಷ ವಲಯವನ್ನು ತ್ಯಜಿಸಲು ನಾಗರಿಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಬ್ರಿಟಿಷ್ ಮತ್ತು ಫ್ರೆಂಚ್ ವಿದೇಶಾಂಗ ಸಚಿವರು ತಿಳಿಸಿದ್ದಾರೆ.
ಲಂಡನ್‌ನಲ್ಲಿ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬ್ಯಾಂಡ್ ಮತ್ತು ಫ್ರೆಂಚ್ ಸಹಯೋಗಿ ಬರ್ನಾರ್ಡ್ ಕೌಚ್‌ನರ್ ಹೊಸ ಕದನವಿರಾಮ ಘೋಷಿಸುವ ಮೂಲಕ ವಿದೇಶಿ ನೆರವಿಗೆ ಮತ್ತು ನಾಗರಿಕರು ಹೊರಹೋಗಲು ಅವಕಾಶವಾಗುತ್ತದೆಂದು ಒತ್ತಾಯಿಸಿದ್ದಾರೆ. ಶ್ರೀಲಂಕಾ ಭದ್ರತಾಪಡೆಗಳು 48 ಗಂಟೆಗಳ ವಿರಾಮದ ಬಳಿಕ ಕಾರ್ಯಾಚರಣೆ ಆರಂಭಿಸಿವೆ.ಆದರೆ ನಾಗರಿಕರು ಸುರಕ್ಷಿತ ಸ್ಥಳಕ್ಕೆ ತೆರಳಲು ಆ ಕಾಲಾವಧಿ ಸಾಕಾಗುವುದಿಲ್ಲವೆಂದು ಅವರಿಬ್ಬರು ತಿಳಿಸಿದ್ದಾರೆ.
ಸಂಘರ್ಷ ವಲಯದಿಂದ ಹೊರಹೋಗದಂತೆ ಎಲ್‌ಟಿಟಿಇ ನಾಗರಿಕರನ್ನು ಬಲವಂತದಿಂದ ತಡೆಯುತ್ತಿರುವುದು ಸ್ಪಷ್ಟಪಟ್ಟಿದೆ. ನಾಗರಿಕರನ್ನು ಮಾನವ ಕವಚದಂತೆ ಬಳಸುವ ಅವರ ದೃಢಸಂಕಲ್ಪವನ್ನು ನಾವು ಖಂಡಿಸುತ್ತೇವೆ ಎಂದು ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ. |