ವಿಶ್ವ ಶಕ್ತಿಗಳ ಜತೆ ತನ್ನ ಪರಮಾಣು ವಿವಾದ ಪರಿಹಾರಕ್ಕೆ ಪ್ಯಾಕೇಜ್ ಸಿದ್ದಪಡಿಸಿರುವುದಾಗಿ ಅಧ್ಯಕ್ಷ ಮಹಮ್ಮದ್ ಅಹ್ಮದಿನೆಜಾದ್ ಬುಧವಾರ ತಿಳಿಸಿದ್ದಾರೆ. ಇರಾನ್ ಪರಮಾಣು ಸಮಸ್ಯೆ ಪರಿಹಾರಕ್ಕೆ ನಾವು ಪ್ಯಾಕೇಜ್ ರೂಪಿಸಿದ್ದೇವೆ. ಅದನ್ನು ಪಾಶ್ಟಿಮಾತ್ಯ ರಾಷ್ಟ್ರಗಳ ಮುಂದೆ ಶೀಘ್ರದಲ್ಲೇ ಮಂಡಿಸುವುದಾಗಿ ಅಹ್ಮದಿನೆಜಾದ್ ಭಾಷಣವೊಂದರಲ್ಲಿ ತಿಳಿಸಿದರು.
ವಿಶ್ವದ 6 ಶಕ್ತಿಗಳ ಜತೆ ರಚನಾತ್ಮಕ ಮಾತುಕತೆಯನ್ನು ಇರಾನ್ ಸ್ವಾಗತಿಸಿದೆ. ವಿವಾದಿತ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ಆಹ್ವಾನವನ್ನು ಕೂಡ ಸ್ವೀಕರಿಸುವುದಾಗಿ ಟೆಹರಾನ್ ಸ್ಪಷ್ಟ ಸಂದೇಶ ನೀಡಿದೆ. ನೂತನ ಪ್ಯಾಕೇಜ್ ಬಗ್ಗೆ ಅಹ್ಮದಿ ನೆಜಾದ್ ಹೆಚ್ಚಿನ ವಿವರಗಳನ್ನು ನೀಡಿಲ್ಲ. 'ಈ ನೂತನ ಪ್ಯಾಕೇಜ್ ಜಗತ್ತಿನಲ್ಲಿ ಶಾಂತಿ ಮತ್ತು ನ್ಯಾಯದ ಖಾತರಿ ಮಾಡುತ್ತದೆ. ಎಲ್ಲ ರಾಷ್ಟ್ರಗಳ ಹಕ್ಕುಗಳನ್ನು ರಕ್ಷಣೆ ಮಾಡುತ್ತದೆಂದು" ಅವರು ಹೇಳಿದರು.
ತನ್ನ ಪರಮಾಣು ಕಾರ್ಯಕ್ರಮ ವಿದ್ಯುತ್ ಉತ್ಪಾದನೆ ಗುರಿ ಹೊಂದಿರುವುದಾಗಿ ಇರಾನ್ ತಿಳಿಸಿದ್ದು, ಅದನ್ನು ಸ್ಥಗಿತಗೊಳಿಸುವುದನ್ನು ಮತ್ತೆ ಮತ್ತೆ ತಳ್ಳಿಹಾಕಿದೆ. |