ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಮತ್ತು ಸಣ್ಣ ಸಾಲಗಳ ಆದ್ಯಪ್ರವರ್ತಕ ಮುಹಮ್ಮದ್ ಯೂನುಸ್ ಅವರನ್ನು ಭೇಟಿ ಮಾಡಿ, ಬಾಂಗ್ಲಾದೇಶದ ಆರೋಗ್ಯ ಸೇವಾವ್ಯವಸ್ಥೆಯಲ್ಲಿ ಪರಿವರ್ತನೆ ತರುವ ಯೋಜನೆಯನ್ನು ಕುರಿತು ಚರ್ಚಿಸಿದರು.
'ಆರ್ಥಿಕ ಹಿಂಜರಿತದ ಮಧ್ಯೆ ಅಭಿವೃದ್ಧಿ' ಕುರಿತು ಜಾಗತಿಯ ವೇದಿಕೆಗೆ ಮುನ್ನ ಬಾಂಗ್ಲಾದೇಶದ ಗ್ರಾಮಿಣ ಬ್ಯಾಂಕ್ ರೂವಾರಿ ಯೂನುಸ್ ಅವರ ಜತೆ ಸುಮಾರು 30 ನಿಮಿಷಗಳ ಕಾಲ ಹಿಲರಿ ಮಾತುಕತೆ ನಡೆಸಿದರು. ಆರೋಗ್ಯ ವ್ಯವಸ್ಥಾಪನೆ ಕೇಂದ್ರಗಳ ಅಭಿವೃದ್ಧಿ ಮೂಲಕ ಬಾಂಗ್ಲಾದೇಶ ಆರೋಗ್ಯಸೇವೆಯನ್ನು ಪರಿವರ್ತಿಸುವ ಯೋಜನೆಗಳನ್ನು ಕುರಿತು ಅವರು ಚರ್ಚಿಸಿದರೆಂದು ವಕ್ತಾರರೊಬ್ಬರು ತಿಳಿಸಿದ್ದಾರೆ.
ಈ ಯೋಜನೆಗಳು ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸೇವೆ ಕಡೆ ಗಮನಹರಿಸಲಿದ್ದು, ಗ್ರಾಮೀಣ ಬ್ಯಾಂಕ್‌ಗಳ ಜತೆ ಸಹಯೋಗ ಹೊಂದಲಿದೆ ಎಂದು ವಕ್ತಾರ ತಿಳಿಸಿದ್ದಾರೆ. ಕ್ಲಿಂಟನ್ ಕೂಡ ದೀರ್ಘಕಾಲದಿಂದ ಸಣ್ಣಸಾಲಗಳು ಮತ್ತು ಆರೋಗ್ಯ ಸೇವೆ ವಿಸ್ತರಣೆ ಪ್ರತಿಪಾದಿಸುತ್ತಿದ್ದಾರೆ. ಕ್ಲಿಂಟನ್ ಮತ್ತು ಯೂನುಸ್ ಪರಿಚಿತರಾಗಿದ್ದು ಸುಮಾರು 20 ವರ್ಷಗಳಿಂದ ಒಂದುಗೂಡಿ ಕೆಲಸಮಾಡುತ್ತಿದ್ದಾರೆ. |