ಉತ್ತರ ಕೊರಿಯದಲ್ಲಿ ಪರಮಾಣು ಸ್ಥಾವರ ನಿರ್ಮಿಸುವ ಕುರಿತು ಮಾಸ್ಕೊ ಪ್ಯೋಂಗ್‌ಯಾಂಗ್ ಜತೆ ಮಾತುಕತೆ ನಡೆಸಿದೆಯೆಂಬ ವರದಿಗಳನ್ನು ರಷ್ಯಾದ ಪರಮಾಣು ನಿಗಮದ ಮುಖ್ಯಸ್ಥ ಸರ್ಗೈ ಕಿರಿಯೆಂಕೊ ತಳ್ಳಿಹಾಕಿದ್ದಾರೆ. ನಾವು ಉತ್ತರ ಕೊರಿಯ ಜತೆ ಕೆಲಸ ಮಾಡುತ್ತಿಲ್ಲ.
ಐಎಇಎ ಸದಸ್ಯರ ಜತೆ ಮತ್ತು ಎನ್‌ಪಿಟಿಗೆ ಸಹಿ ಹಾಕಿದ ರಾಷ್ಟ್ರಗಳ ಜತೆ ಮಾತ್ರ ನಾವು ಕೆಲಸ ಮಾಡುವುದಾಗಿ ಕಿರಿಯೊಂಕೊ ತಿಳಿಸಿದ್ದಾರೆ. ಇತ್ತೀಚೆಗೆ ರಾಕೆಟ್ ಉಡಾವಣೆ ವಿರುದ್ಧ ವಿಶ್ವಸಂಸ್ಥೆ ಕಿಡಿಕಾರಿದ್ದರಿಂದ ದೇಶಬಿಟ್ಟು ಹೊರಕ್ಕೆ ಹೋಗುವಂತೆ ವಿಶ್ವಸಂಸ್ಥೆ ಪರಮಾಣು ತಪಾಸಕರಿಗೆ ಪ್ಯೋಂಗ್‌ಯಾಂಗ್ ಆದೇಶ ನೀಡಿ, ಯಾಂಗ್‌ಬೆನ್ ಪರಮಾಣು ಸ್ಥಾವರದಲ್ಲಿ ಕೆಲಸ ಪುನಾರಂಭಿಸುವುದಾಗಿ ಪಣ ತೊಟ್ಟಿತ್ತು.
ಪಟ್ಟಿಯಲ್ಲಿಲ್ಲದ ರಾಷ್ಟ್ರಗಳ ಜತೆ ನಾವು ಯಾವುದೇ ಚರ್ಚೆ ನಡೆಸುವುದಿಲ್ಲ ಎಂದು ಉತ್ತರಕೊರಿಯ ಹಗುರಜಲದ ಸ್ಥಾವರ ನಿರ್ಮಾಣ ಆರಂಭಿಸಿದೆಯೆಂಬ ಮಾಧ್ಯಮದ ವರದಿಗಳಿಗೆ ಪ್ರತಿಕ್ರಿಯಿಸುತ್ತಾ ಕಿರಿಯಂಕೊ ಹೇಳಿದರು. ಉತ್ತರ ಕೊರಿಯ ಪರಮಾಣು ಇಂಧನದ ಅಭಿವೃದ್ಧಿ ಪುನಾರಂಭಕ್ಕೆ ಯೋಜಿಸಿದ್ದು, ಸಂಸ್ಕರಿತ ಪ್ಲುಟೋನಿಯಂ ಸ್ಥಾಪನೆ ಸಾಮರ್ಥ್ಯವಿರುವ ಹಗುರಜಲ ಪರಮಾಣು ಸ್ಥಾವರ ನಿರ್ಮಾಣದ ಸಾಧ್ಯತೆ ಕುರಿತು ಪರಿಶೀಲನೆ ನಡೆಸಿದೆ. |