ಪಶ್ಚಿಮ ಬಗ್ದಾದ್‌ನ ಇರಾಕ್ ಮತ್ತು ಅಮೆರಿಕ ಸೈನಿಕರ ಜಂಟಿ ಸೇನಾ ನೆಲೆಯೊಂದನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಗೆ ಕನಿಷ್ಠ 16 ಸೈನಿಕರು ಬಲಿಯಾಗಿದ್ದು, 50 ಮಂದಿ ಗಾಯಗೊಂಡಿದ್ದಾರೆಂದು ಇರಾಕ್ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಬ್ಬಾನಿಯಾದಲ್ಲಿ ಸುನ್ನಿ ಬಂಡುಕೋರರ ಪ್ರಾಬಲ್ಯದ ಪ್ರದೇಶದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. |