ಎರಡು ಸಾಧಾರಣ ಭೂಕಂಪಗಳು ಪೂರ್ವ ಆಫ್ಘಾನಿಸ್ತಾನವನ್ನು ಅಪ್ಪಳಿಸಿದ್ದು, 15 ಜನರು ಸತ್ತಿದ್ದು ಹತ್ತಾರು ಮನೆಗಳು ನಾಶವಾಗಿವೆ ಎಂದು ದೃಢಪಡದ ವರದಿಗಳು ತಿಳಿಸಿವೆ. 5.5 ತೀವ್ರತೆಯ ಭೂಕಂಪವು ಸ್ಥಳೀಯ ಕಾಲಮಾನ 1.57ಕ್ಕೆ ಅಪ್ಪಳಿಸಿತೆಂದು ಅಮೆರಿಕ ಬೌಗೋಳಿಕ ಸಮೀಕ್ಷೆ ತಿಳಿಸಿದ್ದು, ಎರಡು ಗಂಟೆಗಳ ಬಳಿಕ 5.1 ತೀವ್ರತೆಯ ಲಘುಕಂಪನ ಉಂಟಾಯಿತೆಂದು ಹೇಳಿದೆ.
ಕಾಬೂಲ್ ಪೂರ್ವಕ್ಕೆ 50 ಮೈಲು ದೂರದಲ್ಲಿ ಪಾಕಿಸ್ತಾನ ಗಡಿ ಸಮೀಪ ಭೂಕಂಪ ಅಪ್ಪಳಿಸಿದೆ. ಭೂಕಂಪದಿಂದ ನಾಶವಾದ ಮನೆಗಳ ಅವಶೇಷಗಳಲ್ಲಿ ಗ್ರಾಮಸ್ಥರು ಸತ್ತವರಿಗಾಗಿ ಶೋಧಿಸುತ್ತಿದ್ದರೆಂದು ರಾಯ್ಟರ್ಸ್ ವರದಿ ಮಾಡಿದೆ. ಗ್ರಾಮಸ್ಥರು ಹೇಳುವ ಪ್ರಕಾರ ಭೂಕಂಪದಿಂದ ಸುಮಾರು 40ಕ್ಕೂ ಹೆಚ್ಚು ಜನರು ಸತ್ತಿದ್ದಾರೆ.
ಉತ್ತರ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಪರ್ವತಪ್ರದೇಶಗಳು ಆಗಾಗ್ಗೇ ಭೂಕಂಪದ ಪ್ರಕೋಪಕ್ಕೆ ತುತ್ತಾಗುತ್ತಿದ್ದು, 2005 ಅಕ್ಬೋಬರ್‌ನಲ್ಲಿ ವಾಯವ್ಯ ಪಾಕಿಸ್ತಾನದಲ್ಲಿ ಅಪ್ಪಳಿಸಿದ 7.6 ತೀವ್ರತೆಯ ಭೂಕಂಪಕ್ಕೆ 74,000 ಜನರು ಬಲಿಯಾಗಿದ್ದರು ಮತ್ತು 3.5 ಮಿಲಿಯ ಜನರು ನಿರಾಶ್ರಿತರಾದರು. |