ಇಂಡಿಯಾನದ ಮಾಜಿ ಡೆಮಾಕ್ರಟಿಕ್ ಸದಸ್ಯ ಮತ್ತು 9/11 ಆಯೋಗದ ಮಾಜಿ ಸದಸ್ಯ ಟಿಮ್ ರೋಯಿಮರ್ ಅವರು ಭಾರತಕ್ಕೆ ಅಮೆರಿಕದ ಮುಂದಿನ ರಾಯಭಾರಿಯಾಗಲಿದ್ದಾರೆ. ಪ್ರತಿಷ್ಠಿತ ಅಮೆರಿಕ ವಿದೇಶಾಂಗ ನೀತಿ ನಿಯತಕಾಲಿಕೆಯು ತನ್ನ ವೆಬ್‌ಪೋಸ್ಟ್‌ನಲ್ಲಿ ಈ ವಿಷಯ ತಿಳಿಸಿದೆ. ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿಯಾದ ರಾಷ್ಟ್ರೀಯ ನೀತಿ ಕೇಂದ್ರಕ್ಕೆ ರೋಯಿಮರ್ ಪ್ರಸಕ್ತ ಅಧ್ಯಕ್ಷರಾಗಿದ್ದಾರೆ.
ಸಿಎನ್‌ಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅವರ ಸ್ವವಿವರದಲ್ಲಿ ಸಿಎನ್‌ಪಿ ಮುಖ್ಯಸ್ಥರಲ್ಲದೇ ರೋಯಿಮರ್ ಸಮೂಹ ನಾಶಕ ಶಸ್ತ್ರಾಸ್ತ್ರಗಳ ನಿವಾರಣೆ, ಪ್ರಸರಣ ಮತ್ತು ಭಯೋತ್ಪಾದನೆ ನಿವಾರಣೆ ಕುರಿತ ಆಯೋಗಕ್ಕೆ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.
1991ರಿಂದ 2003ರವರೆಗೆ ಇಂಡಿಯಾನದ ಮೂರನೇ ಜಿಲ್ಲೆಯನ್ನು ಪ್ರತಿನಿಧಿಸಿದ್ದ ರೋಯಿಮರ್, ಆರಂಭದ ಚುನಾವಣೆ ಪ್ರಚಾರ ಹಂತದಲ್ಲಿ ಒಬಾಮಾ ಅವರಿಗೆ ಬೆಂಬಲವಾಗಿ ನಿಂತಿದ್ದರು. ಇಂಡಿಯಾನದಲ್ಲಿ ಒಬಾಮಾ ಗೆಲುವಿಗೆ ಅವರ ಬೆಂಬಲವು ಮುಖ್ಯ ಕಾರಣವೆಂದು ಹೇಳಲಾಗಿದೆ. ಸಿಐಎ ನಿರ್ದೇಶಕ ಹುದ್ದೆಗೆ ಈ ಮುಂಚೆ ರೋಯಿಮರ್ ಹೆಸರು ಹರಿದಾಡುತ್ತಿತ್ತು. ಅದು ಅಂತಿಮವಾಗಿ ಲಿಯೊನ್ ಪನೆಟ್ಟಾ ಪಾಲಾಗಿದೆ. |