ಒಂಬತ್ತು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು ಇಂಡೋನೇಶಿಯ ಪಪುವಾ ಪ್ರಾಂತ್ಯದಲ್ಲಿ ದಟ್ಟವಾದ ಅರಣ್ಯದಿಂದ ಆವೃತವಾದ ಪರ್ವತದಲ್ಲಿ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಬದುಕುಳಿದವರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಅಪಘಾತವಾದ ಸ್ಥಳಕ್ಕೆ ಶೋಧಕ ತಂಡವು ಧಾವಿಸಿದೆ.
ಕಳೆದ ವಾರ ನಡೆದ ಚುನಾವಣೆಯ ಮತಪತ್ರಗಳನ್ನು ಕುಗ್ರಾಮ ಮುಲ್ಯಾಕ್ಕೆ ಏಕ ಎಂಜಿನ್ ವಿಮಾನವು ಒಯ್ಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವಿಮಾನದಲ್ಲಿ ಸ್ಥಳೀಯ ಚುನಾವಣೆ ಆಯೋಗದ ಅನೇಕ ಸದಸ್ಯರು ಸೇರಿದಂತೆ 7 ಮಂದಿ ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ವಿಮಾನದಲ್ಲಿ ಕುಳಿತಿದ್ದರು.
ಪಪುವಾ ಪ್ರದೇಶ ವಿಮಾನ ಹಾರಾಟಕ್ಕೆ ಅಪಾಯಕವಾಗಿ ಸ್ಥಳವೆಂದು ಹೇಳಲಾಗಿದ್ದು, ಅನೇಕ ಪ್ರದೇಶಗಳು ಪರ್ವತಮಯವಾಗಿದ್ದು, ಮೋಡಗಳು ಕೆಳಭಾಗದಲ್ಲಿ ಸಾಗುವ ಮತ್ತು ದಿಢೀರ್ ಹವಮಾನ ಬದಲಾವಣೆಯ ಅಪಾಯಗಳಿಂದ ಪೀಡಿತವಾಗಿದೆ. |