ಯುದ್ಧಪೀಡಿತ ಪ್ರದೇಶದಿಂದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುಕೂಲಕರವಾಗುವಂತೆ ಕದನ ವಿರಾಮವನ್ನು ವಿಸ್ತರಿಸುವಂತೆ ಶ್ರೀಲಂಕಾವನ್ನು ಭಾರತ ಸರಕಾರ ಒತ್ತಾಯಿಸಿದೆ. ಇದೇ ವೇಳೆ ಎಲ್‌ಟಿಟಿಇ ತನ್ನ ವಶದಲ್ಲಿರುವ ತಮಿಳು ನಾಗರಿಕರನ್ನು ಬಿಡುಗಡೆ ಮಾಡಬೇಕೆಂದು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಹೇಳಿಕೆ ನೀಡಿದ್ದಾರೆ. |