ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸಿಐಎ ಚಿತ್ರಹಿಂಸೆ ವಿವರ: ಒಬಾಮಾಗೆ ತರಾಟೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಐಎ ಚಿತ್ರಹಿಂಸೆ ವಿವರ: ಒಬಾಮಾಗೆ ತರಾಟೆ
ಸಿಐಎ ಭಯೋತ್ಪಾದನೆ ತನಿಖೆ ಸಂದರ್ಭದಲ್ಲಿ ಚಿತ್ರಹಿಂಸೆಯ ವಿಧಾನಗಳ ಬಗ್ಗೆ ವಿವರಗಳುಳ್ಳ ನ್ಯಾಯಾಂಗ ಇಲಾಖೆ ಮಾಹಿತಿಗಳನ್ನು ಬಿಡುಗಡೆ ಮಾಡಿದ ಬರಾಕ್ ಒಬಾಮಾ ಅವರನ್ನು ಬುಷ್ ಆಡಳಿತದ ಇಬ್ಬರು ಮಾಜಿ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಅಮೆರಿಕದ ಬೇಹುಗಾರರಲ್ಲಿ ಭಯ ಮತ್ತು ಅಂಜುಬುರುಕತನ ಆವರಿಸುತ್ತದೆಂದು ಹೇಳಿದ್ದಾರೆ.

ಈ ಅಭಿಪ್ರಾಯಗಳನ್ನು ಕಾನೂನಿನ ವಿಷಯವಾಗಿ ಬಿಡುಗಡೆ ಮಾಡಿದ್ದು ಅನಗತ್ಯ ಎಂದು ಮಾಜಿ ಸಿಐಎ ಪ್ರಧಾನ ನಿರ್ದೇಶಕ ಮೈಕೇಲ್ ಹೇಡನ್ ಮತ್ತು ಮಾಜಿ ಅಟಾರ್ನಿ ಜನರಲ್ ಮೈಕೆಲ್ ಮುಕಾಸೆ ಸಂಪಾದಕೀಯದಲ್ಲಿ ಪ್ರಕಟಿಸಿದ್ದಾರೆ. ಜಾರ್ಜ್ ಬುಷ್ ಆಡಳಿತದಲ್ಲಿ ಉನ್ನತ ಕಾನೂನು ಅಧಿಕಾರಿಗಳು ಬರೆದ ಮೆಮೊಗಳನ್ನು ಬಿಡುಗಡೆ ಮಾಡುವ ಒಬಾಮಾ ಕ್ರಮವನ್ನು ತೂಕದ ನಿರ್ಧಾರ ಎಂದು ಶ್ವೇತಭವನದ ಹಿರಿಯ ಸಲಹೆಗಾರ ಡೇವಿಡ್ ಆಕ್ಸಲ್‌ರಾಡ್ ಇದಕ್ಕೆ ಸಮಜಾಯಿಷಿಕೆ ನೀಡಿದ್ದಾರೆ.

ಒಬಾಮಾ ಈ ಬಗ್ಗೆ ಸುದೀರ್ಘವಾಗಿ ಚಿಂತಿಸಿದ್ದಾರೆ ಮತ್ತು ವ್ಯಾಪಕವಾಗಿ ಸಮಾಲೋಚಿಸಿದ್ದಾರೆಂದು ಆಕ್ಸೆ‌ಲ್‌ರಾಡ್ ಪೊಲಿಟಿಕೊ ನ್ಯೂಸ್ ವೆಬ್‌ಸೈಟ್‌ಗೆ ತಿಳಿಸಿದರು.ಗೋಪ್ಯ ಕಾರ್ಯಾಚರಣೆಯ ಪಾವಿತ್ರ್ಯತೆ ಮತ್ತು ಜನರಲ್ಲಿ ನಂಬಿಕೆ ಇರಿಸುವುದು, ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮವು ಒಂದು ಕಡೆಯಾಗಿದ್ದರೆ ಇನ್ನೊಂದು ಕಡೆ ಕಾನೂನು ಮತ್ತು ಪಾರದರ್ಶಕತೆಯಲ್ಲಿ ಒಬಾಮಾ ನಂಬಿಕೆ ಎಂದು ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಬಿಜಲಿ' ಚಂಡಮಾರುತ: ಬಾಂಗ್ಲಾದಲ್ಲೂ ಎಚ್ಚರಿಕೆ
ಲಂಕಾ: ಕದನ ವಿರಾಮಕ್ಕೆ ಒತ್ತಾಯ
ತಮಿಳರ ಸಂಕಷ್ಟ ಪರಿಹಾರಕ್ಕೆ ನಂಬಿಯಾರ್ ಚರ್ಚೆ
ಅಬ್ದುಲ್ ಅಜೀಜ್ ಲಾಲ್ ಮಸ್ಜೀದ್ ಮಸೀದಿಗೆ ವಾಪಸು
ಸಿಐಎ 'ಚಿತ್ರಹಿಂಸೆ' ಸಿಬ್ಬಂದಿಗೆ ಶಿಕ್ಷೆ ವಿಧಿಸದ ಒಬಾಮಾ
ಇಂಡೋನೇಶಿಯ ವಿಮಾನ ಅಪಘಾತಕ್ಕೆ 9 ಬಲಿ?