ಪಾಕಿಸ್ತಾನದಲ್ಲಿ ತೀವ್ರವಾದಿ ಶಕ್ತಿಗಳು ತಮ್ಮ ಪ್ರಭಾವಲಯವನ್ನು ವಿಸ್ತರಿಸಿಕೊಳ್ಳುತ್ತಿದ್ದು, ಉಗ್ರಗಾಮಿಗಳು ಭಾರತದೊಳಕ್ಕೆ ಇನ್ನೊಂದು ಪ್ರಮುಖ ಭಯೋತ್ಪಾದಕ ದಾಳಿ ನಡೆಸಬಹುದೆಂದು ಅಮೆರಿಕದ ಚಿಂತಕರ ಚಾವಡಿ ಶುಕ್ರವಾರ ಎಚ್ಚರಿಸಿದೆ.
ಮೊದಲ ಹಂತದ ಲೋಕಸಭೆ ಚುನಾವಣೆ ಬಳಿಕ ನೆರೆಯ ಪಾಕಿಸ್ತಾನದಲ್ಲಿ ಜಿಹಾದಿ ಬಂಡುಕೋರ ಕೃತ್ಯಗಳು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಹರಡಿ ಭಾರತದ ಮನೆಬಾಗಿಲ ಬಳಿಯೇ ಬಂದಿರುವುದನ್ನು ಭಾರತ ಭೀತಿಯಿಂದ ಗಮನಿಸುತ್ತಿದೆಯೆಂದು ಬೇಹುಗಾರಿಕೆ ವಿಶ್ಲೇಷಣೆಯಲ್ಲಿ ಸ್ಟ್ರಾಟ್‌ಫರ್ ತಿಳಿಸಿದೆ.
ಪಾಕಿಸ್ತಾನದ ಐಎಸ್‌ಐ ಈ ಮುಂಚೆ ನಿಯಂತ್ರಿಸುತ್ತಿದ್ದ ಇಸ್ಲಾಮಿಕ್ ಉಗ್ರಗಾಮಿಗಳು ಅಲ್ ಖಾಯಿದಾ ಮತ್ತು ತಾಲಿಬಾನ್ ಜಿಹಾದಿ ಪರಿಧಿಯೊಳಕ್ಕೆ ಪ್ರವೇಶಿಸಿದ್ದು ಇನ್ನಷ್ಟು ಮಾರಕ, ಜಟಿಲ ದಾಳಿಗಳನ್ನು ನಡೆಸಲು ಯೋಜಿಸಿದ್ದಾರೆಂದು ಸ್ಟ್ರಾಟ್‌ಪರ್ ತಿಳಿಸಿದೆ. ಸಾಂಪ್ರದಾಯಿಕವಾಗಿ ಭಾರತದ ಮೇಲೆ ಕಣ್ಣಿರಿಸಿರುವ ಈ ಉಗ್ರಗಾಮಿಗಳಿಂದ ಭಾರತ ಇನ್ನೊಂದು ದೊಡ್ಡ ಪ್ರಮಾಣದ ದಾಳಿಗೆ ಸಾಕ್ಷಿಯಾಗುವ ಸಂಭವವಿದೆ ಎಂದು ಸ್ಟ್ರಾಟ್‌ಫರ್ ಹೇಳಿದೆ.
ಕಾಂಗ್ರೆಸ್ ಆಡಳಿತದಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸುವುದರಿಂದ ಸಂಯಮ ತೋರಿಸಿದೆ. ಪಾಕಿಸ್ತಾನದ ಮೇಲೆ ದಾಳಿ ಮಾಡುವುದರಿಂದ ಅಲ್ಲಿ ಇನ್ನಷ್ಟು ಅಭದ್ರತೆ ಮೂಡಿ, ಆಪ್ಘನ್-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನ ಮಿಲಿಟರಿ ಗಮನ ದಿಕ್ಕು ಬದಲಾಯಿಸುತ್ತದೆಂಬ ಭಯದಿಂದ ಭಾರತ ಸಂಯಮ ತೋರಿತೆಂದು ಸ್ಟ್ರಾಟ್‌ಫರ್ ತಿಳಿಸಿದೆ. |