ಅಲಾಸ್ಕ ಗವರ್ನರ್ ಸಾರಾ ಪಾಲಿನ್ ಗರ್ಭಪಾತ ವಿರೋಧಿ ಸಮೂಹದ ಭೋಜನಕೂಟದಲ್ಲಿ ಮಾತನಾಡುತ್ತಾ, ಗರ್ಭಪಾತದ ಹಕ್ಕುಗಳಿಗೆ ಬೆಂಬಲಿಸಿದ ಅಧ್ಯಕ್ಷ ಬರಾಕ್ ಒಬಾಮಾ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯೋಜಿತವಲ್ಲದ ಗರ್ಭದಾರಣೆಯು ಅನಿಷ್ಠವಾಗಿದ್ದು, ಗರ್ಭಪಾತದ ಮೂಲಕ ಬಗೆಹರಿಸಿಕೊಳ್ಳಬಹುದೆಂಬ ವಾದವನ್ನು ಪಾಲಿನ್ ಪ್ರಶ್ನಿಸಿದ್ದಾರೆ.
2008ರಲ್ಲಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಪಾಲಿನ್, ಗುರುವಾರ ರಾತ್ರಿ ವಾಂಡರ್‌ಬರ್ಗ್ ಕೌಂಟಿಯಲ್ಲಿ 3000 ಜನರಿಂದ ತುಂಬಿದ ಭೋಜನಕೂಟದ ಸಭೆಯಲ್ಲಿ ಮಾತನಾಡುತ್ತಿದ್ದರು. ಗುಂಪಿನಲ್ಲಿ ಕೆಲವು ಜನರು ಪಾಲಿನ್ 2012ರ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಎಂಬ ಆಶಯದೊಂದಿಗೆ ಬಿಳಿಯ ಪಾಲಿನ್ '2012' ಟಿ ಷರ್ಟ್‌ಗಳನ್ನು ಧರಿಸಿದ್ದರು.
ಡೌನ್ ಸಿಂಡ್ರೋಂ ಕಾಯಿಲೆಗೆ ಗುರಿಯಾದ ತಮ್ಮ ಪುತ್ರ ಟ್ರಿಗ್‌ಗೆ ಗರ್ಭಿಣಿಯಾಗಿದ್ದಾಗ ತಾವು ಎದುರಿಸಿದ ಸವಾಲುಗಳಿಂದ ಗರ್ಭಪಾತ ವಿರೋಧಿ ನಂಬಿಕೆಗಳನ್ನು ಬಿಟ್ಟುಬಿಡುವ ಅವಕಾಶ ಸಿಕ್ಕಿತ್ತು. ಡೌನ್ ಸಿಂಡ್ರೋಮ್‌ನಿಂದ ತಮ್ಮ ಪುತ್ರ ಹುಟ್ಟುತ್ತಾನೆಂದು ತಿಳಿದ ಬಳಿಕ ತಾವು ಆಗಾಗ್ಗೆ ಪ್ರಾರ್ಥನೆ ಸಲ್ಲಿಸಿದ್ದಾಗಿ ಅವರು ಹೇಳಿದರು. ಅವನು ಹುಟ್ಟಿದ ಕ್ಷಣವೇ ತನ್ನ ಪ್ರಾರ್ಥನೆ ಫಲಿಸಿತೆಂದು ಪಾಲಿನ್ ಹೇಳಿದ್ದಾರೆ. ಟ್ರಿಗ್ ಒಂದು ಪವಾಡವಾಗಿದ್ದು, ಇತರೆ ಮಹಿಳೆಯರು ಅಂತಹ ಅವಕಾಶ ಪಡೆಯಬೇಕೆಂದು ಬಯಸುವುದಾಗಿ ಅವರು ನುಡಿದರು. |