ಪಾಕಿಸ್ಥಾನದ ಕಲಹ ಪೀಡಿದ ವಾಯವ್ಯ ಗಡಿ ಪ್ರಾಂತ್ಯ ಪ್ರದೇಶದಲ್ಲಿನ ಚೆಕ್‌ಪೋಸ್ಟ್ ಒಂದನ್ನು ಗುರಿಯಾಸಿಕೊಂಡು ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 20 ಮಂದಿ ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಭದ್ರತಾ ಸಿಬ್ಬಂದಿಗಳೇ ಆಗಿದ್ದು, ಒಂದು ವಾರದ ಅವಧಿಯಲ್ಲಿ ಸುರಕ್ಷಾ ಪಡೆಯ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. |