ಪಾಕಿಸ್ತಾನವು ಅಪಾಯದಲ್ಲಿದೆ ಎಂದು ಹೇಳಿರುವ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್, ರಾಷ್ಟ್ರದ ನಾಯಕತ್ವವು, ವಿಶ್ವ ಸಮುದಾಯ ವ್ಯಕ್ತಪಡಿಸಿರುವ ಕಳವಳವನ್ನು ಪರಿಗಣಿಸಬೇಕು ಎಂದು ಹೇಳಿದ್ದಾರಾದರೂ, ಯಾರೇ ಆದರೂ ಯಾವುದೇ ಕ್ರಮವನ್ನು ಕೈಗೊಳ್ಳುವಂತೆ ಅಪ್ಪಣೆ ವಿಧಿಸುವಂತಿಲ್ಲ ಎಂದು ಹೇಳಿದ್ದಾರೆ.
"ರಾಷ್ಟ್ರವು ಅಪಾಯದಲ್ಲಿದೆ. ಚಿಕ್ಕಪುಟ್ಟ ಹಾಗೂ ಹಳೆಯ ವಿಷಯಗಳನ್ನು ನಿರ್ಲಕ್ಷ್ಯಿಸುವುದರಿಂದ ಸಮಸ್ಯೆಗಳನ್ನು ಎದುರಿಸಬೇಕಾಬಹುದು" ಎಂದು ಮುಶರಫ್ ಅವರು ಸೌದಿ ಅರೇಬಿಯಾಕ್ಕೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.
ವಿಷಯವು ಗಂಭೀರವಾಗಿದೆ. ಪಾಕಿಸ್ತಾನವು ಎದುರಿಸುತ್ತಿರುವ ಸಮಸ್ಯೆಗಳ ಗಂಭೀರತೆಯತ್ತ ವಿಶ್ವದ ಪ್ರತಿಯೊಬ್ಬರು ನೋಟಹರಿಸುತ್ತಿದ್ದಾರೆ ಎಂದು ಅವರು ನುಡಿದರು.
ಇದೇ ವೇಳೆ ಯಾರೇ ಆದರೂ ಯಾವುದೇ ಕ್ರಮವನ್ನು ಕೈಗೊಳ್ಳುವಂತೆ ಕಟ್ಟಪ್ಪಣೆ ವಿಧಿಸುವಂತಿಲ್ಲ ಎಂದು ಹೇಳಿದರಲ್ಲದೆ, ನಾನು ನಮ್ಮದೆ ಆದ ಕಾರ್ಯವನ್ನು ಕೈಗೊಂಡು ಈ ರಾಷ್ಟ್ರವನ್ನು ಉಳಿಸಿ ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ನುಡಿದರು. |