ವಾಯುವ್ಯಪಾಕಿಸ್ತಾನದಲ್ಲಿ ಭದ್ರತಾ ಪಡೆಗಳ ಬೆಂಗಾವಲು ವಾಹನದ ಮೇಲೆ ಶನಿವಾರ ನಡೆಸಿರುವ ಆತ್ಮಾಹುತಿ ಕಾರ್‌ಬಾಂಬ್ ದಾಳಿಯ ಹೊಣೆ ಹೊತ್ತಿರುವ ತಾಲಿಬಾನ್ ಬುಡಕಟ್ಟು ಪ್ರದೇಶದಲ್ಲಿ ಅಮೆರಿಕ ದಾಳಿ ನಿಲ್ಲಿಸುವ ತನಕ ಇಂತಹ ದಾಳಿಗಳು ಮುಂದುವರಿಯಲಿದೆ ಎಂಬ ಎಚ್ಚರಿಕ ನೀಡಿದೆ. ಶನಿವಾರದ ದಾಳಿಯಲ್ಲಿ 27 ಮಂದಿ ಹತರಾಗಿದ್ದರು.
ವಾಯುವ್ಯ ಪಾಕಿಸ್ತಾನದ ಹಂಗು ಜಿಲ್ಲೆಯ ದೊಬ ಎಂಬಲ್ಲಿ ಭದ್ರತಾ ಪಡೆಗಳ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದು ತಮ್ಮ ಸಂಘಟನೆ ಎಂಬುದಾಗಿ ತಾಲಿಬಾನ್ ಕಮಾಂಡರ್ ಹಕಿಮುಲ್ಲ ಮೆಸೂದ್ ಅಜ್ಞಾತ ಸ್ಥಳದಿಂದ ಕರೆ ಮಾಡಿ ತಿಳಿಸಿದ್ದಾನೆ.
ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಅಮೆರಿಕವು ತನ್ನ ದಾಳಿಯನ್ನು ನಿಲ್ಲಿಸದೇ ಇದ್ದರೆ ಇನ್ನೂ ಸಹ ಇಂತಹುದೇ ದಾಳಿಗಳು ನಡೆಯಲಿವೆ ಎಂದು ಮೆಸೂದ್ ಎಚ್ಚರಿಸಿದ್ದಾನೆ. |