ಭಾರತದ ಗಾಳಿ ವಿದ್ಯುತ್ ಜನಕರೆಂದೇ ಹೆಸರಾದ ತುಳಸಿ ತಂತಿ ಅವರು ಅಸಾಂಪ್ರದಾಯಿಕ ಇಂಧನ ಮೂಲಗಳಿಗೆ ನೀಡಿದ ತಮ್ಮ ಗಣನೀಯ ಕೊಡುಗೆಗಾಗಿ ಸಿಐಎಫ್ ಚಂಚಲಾನಿ ಗ್ಲೋಬಲ್ ಇಂಡಿಯಾ ಪ್ರಶಸ್ತಿ 2009ನ್ನು ನೀಡಿ ಪುರಸ್ಕರಿಸಲಾಗಿದೆ.
ಕೆನಡಾ ಇಂಡಿಯ ಪ್ರತಿಷ್ಠಾನ ಸ್ಥಾಪಿಸಿದ ಪ್ರಶಸ್ತಿ ಟ್ರೋಫಿ ಮತ್ತು 50,000 ಡಾಲರ್ ನಗದನ್ನು ಒಳಗೊಂಡಿದೆ. ತಂತಿ ಅವರನ್ನು 1.1 ಬಿಲಿಯ ಡಾಲರ್ ಕುಟುಂಬದ ಆಸ್ತಿಯೊಂದಿಗೆ ಭಾರತದ 33ನೇ ಅತೀ ಶ್ರೀಮಂತ ವ್ಯಕ್ತಿಯೆಂದು ಫೋರ್ಬ್ಸ್ ಮ್ಯಾಗಜಿನ್ 2008ರಲ್ಲಿ ಗುರುತಿಸಿತ್ತು. ಸಿಐಎಫ್ ಆಯೋಜಿಸಿದ ಸಮಾರಂಭದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯ ಮತ್ತು ಕೆನಡಾದ ಲಿಬರಲ್ ಪಕ್ಷದ ನಾಯಕ ಮೈಕೆಲ್ ಇಗ್ನಾಟಿಫ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
51 ವರ್ಷಗಳ ವಯಸ್ಸಿನ ತಂತಿಯನ್ನು ಅಭಿನಂದಿಸಿ ಮಾತನಾಡಿದ ಅಹ್ಲುವಾಲಿಯ, ' ಜಾಗತಿಕ ಸನ್ನಿವೇಶದಲ್ಲಿ ಭಾರತದ ಪುನರುತ್ಥಾನಕ್ಕೆ ಅವರು ನೀಡಿದ ಮಾರ್ಗದರ್ಶನದ ಕೊಡುಗೆಯನ್ನು ಈ ಪ್ರಶಸ್ತಿ ಮೂಲಕ ಗುರುತಿಸಲಾಗಿದೆ. ಭಾರತದ ಸಮೃದ್ಧ ಸಾಂಸ್ಕೃತಿಕ ಪರಂಪರೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅದರ ನಾಯಕತ್ವವು ಇಂಗಾಲದ ಹೊರಹೊಮ್ಮುವಿಕೆ ಮತ್ತು ಇಂಧನ ಕೊರತೆಗಳ ಜಾಗತಿಕ ಸವಾಲಿಗೆ ಹೊಸ ಪರಿಹಾರಗಳನ್ನು ಹುಡುಕಲು ಸಾಧ್ಯವಾಗಿಸಿದೆ ಎಂದು ಹೇಳಿದ್ದಾರೆ.
|