ಜಮೈಕಾದ ಮಾಂಟೆಗೊ ಕೊಲ್ಲಿಯಲ್ಲಿ ಬಂದೂಕುಧಾರಿಯೊಬ್ಬ ವಿಮಾನವೊಂದನ್ನು ಸೋಮವಾರ ಅಪಹರಿಸಿದ್ದು, ಅದರಲ್ಲಿದ್ದ 167 ಪ್ರಯಾಣಿಕರನ್ನು ಬಿಡುಗಡೆ ಮಾಡಿದ ಬಳಿಕ ಐವರು ಸಿಬ್ಬಂದಿಯನ್ನು ಮತ್ತು ಇಬ್ಬರು ಪ್ರಯಾಣಿಕರನ್ನು ಒತ್ತೆಯಿರಿಸಿಕೊಂಡಿದ್ದಾನೆಂದು ರೇಡಿಯೊ ಜಮೈಕಾ ವರದಿಗಾರನನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.
ಸ್ಯಾಂಗ್‌ಸ್ಟರ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನೋವಾ ಸ್ಕಾಟಿಯ ಕಡೆ ತೆರಳುತ್ತಿದ್ದ ಹ್ಯಾಲಿಫಾಕ್ಸ್ ವಿಮಾನದಲ್ಲಿ ಬಂದೂಕುಧಾರಿ ಒಂದು ಗುಂಡು ಹಾರಿಸಿದ್ದು ಯಾರಿಗೂ ಗುಂಡೇಟು ತಾಕಿಲ್ಲವೆಂದೂ, ಸಂಧಾನ ಮಾತುಕತೆ ನಡೆಯುತ್ತಿದೆಯೆಂದು ವರದಿ ತಿಳಿಸಿದೆ.
ಸುಳ್ಳು ಗುರುತುಪತ್ರದೊಂದಿಗೆ ಶಂಕಿತ ಆರೋಪಿ ವಿಮಾನನಿಲ್ದಾಣದ ಭದ್ರತೆ ಉಲ್ಲಂಘಿಸಿ, ವಿಮಾನ ಮೇಲೆ ಹಾರುವ ಸ್ವಲ್ಪ ಮುಂಚೆ ಏರಿದ್ದನೆಂದು ಮಾಧ್ಯಮದ ವರದಿಗಳು ತಿಳಿಸಿವೆ.
|