ಇಡೀ ರಾಷ್ಟ್ರವೇ ತಾಲಿಬಾನ್ ಮುಷ್ಠಿಯಲ್ಲಿ ಬೀಳಬಹುದು ಎಂದು ಮುತ್ತಾಹಿತಾ ಕವಾಮಿ ಆಂದೋಳನದ ಮುಖ್ಯಸ್ಥ ಅಲ್ತಾಫ್ ಹುಸೇನ್ ಭೀತಿ ವ್ಯಕ್ತಪಡಿಸಿದ್ದಾರೆ. ಸೋಲನ್ನು ಒಪ್ಪಿಕೊಂಡು ಉಗ್ರಗಾಮಿ ಸಂಘಟನೆ ಮುಂದೆ ಮಂಡಿಯೂರಿ ಕುಳಿತ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಭಯೋತ್ಪಾದನೆಯತ್ತ ಮುಖಮಾಡಿದ್ದ ಹೆಚ್ಚೆಚ್ಚು ಜನರು ತೀವ್ರವಾದಿ ಗುಂಪನ್ನು ಸೇರಲು ಇದರಿಂದ ಉತ್ತೇಜಿತರಾಗುತ್ತಾರೆಂದು ಹುಸೇನ್ ಪ್ರತಿಕ್ರಿಯಿಸಿದರು.ಇಲ್ಲಿಯವರೆಗೆ ಮಾಜಿ ಪ್ರಧಾನಮಂತ್ರಿ ಮತ್ತು ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ತಾಲಿಬಾನಿಗಳನ್ನು ತೀವ್ರವಾಗಿ ಖಂಡಿಸಿಲ್ಲ ಎಂದು ಮೂಲಗಳು ಹೇಳಿವೆ. ಪಾಕಿಸ್ತಾನ ಅಧ್ಯಕ್ಷ ಜರ್ದಾರಿ ಕೂಡ ಸ್ವಾತ್ ಕಣಿವೆಯಲ್ಲಿ ಇಸ್ಲಾಮಿಕ್ ಕಾನೂನು ಜಾರಿಗೆ ತರಬೇಕೆಂಬ ತಾಲಿಬಾನಿಗಳ ಬೇಡಿಕೆಗೆ ಮಣಿದರು.
ಉಗ್ರಗಾಮಿಗಳಿಂದ ಬೆಂಕಿ ಕೆಂಡವಾದ ಸ್ವಾತ್‌ನಲ್ಲಿ ಸಂಪೂರ್ಣ ಶಾಂತಿ ನೆಲೆಸಿದ ಬಳಿಕ ಇಸ್ಲಾಮಿಕ್ ಕಾನೂನು ಜಾರಿಗೆ ತರುವ ಪೂರ್ವಷರತ್ತು ಹಾಕಿದ್ದರು. ಆದರೆ ಶಸ್ತ್ರಾಸ್ತ್ರ ತ್ಯಜಿಸದ ತಾಲಿಬಾನಿಗಳು ಷರಿಯತ್ ಕಾನೂನನ್ನು ಬಲವಂತವಾಗಿ ಅಲ್ಲಿನ ಜನರ ಮೇಲೆ ಹೇರಿದ್ದಾರೆಂದು ಮೂಲಗಳು ತಿಳಿಸಿವೆ. |