ವಿಶ್ವಸಂಸ್ಥೆಯ ಜನಾಂಗೀಯ ವಿರೋಧಿ ಸಮಾವೇಶದಲ್ಲಿ ಇರಾನ್ ಅಧ್ಯಕ್ಷ ಮಹಮದ್ ಅಹ್ಮದಿ ನೆಜಾದ್ "ಕ್ರೂರ" ಇಸ್ರೇಲ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ ಬಳಿಕ ಐರೋಪ್ಯ ಒಕ್ಕೂಟದ ಪ್ರತಿನಿಧಿಗಳು ಸಮಾವೇಶದಿಂದ ಸಭಾತ್ಯಾಗ ಮಾಡಿದ ಘಟನೆ ನಡೆದಿದೆ.
ಅಮೆರಿಕ, ಇಸ್ರೇಲ್ ಮತ್ತು ಆಸ್ಟ್ರೇಲಿಯ ಈಗಾಗಲೇ ಬಹಿಷ್ಕಾರ ಹಾಕಿದ್ದ ಸಭೆಯಲ್ಲಿ ಅಹ್ಮದಿ ನೆಜಾದ್ ವೇದಿಕೆಗೆ ಆಗಮಿಸಿದ ಕೂಡಲೇ ಮತ್ತಷ್ಟು ವಿವಾದದ ಸುಳಿಯಲ್ಲಿ ಮುಳುಗಿತು. ಇದಕ್ಕೆ ಮುಂಚೆ ಯಹೂದಿ ರಾಷ್ಟ್ರವನ್ನು ನಕ್ಷೆಯಿಂದ ಅಳಿಸಿಹಾಕಬೇಕೆಂದು ಕರೆ ನೀಡಿದ್ದ ಅಹ್ಮದಿ ನೆಜಾದ್ ಪ್ಯಾಲೆಸ್ಟೈನ್ ಆಕ್ರಮಿತ ರಾಷ್ಟ್ರದಲ್ಲಿ ಸಂಪೂರ್ಣ ಜನಾಂಗೀಯ ಸರ್ಕಾರ ಸ್ಥಾಪನೆಯನ್ನು ಕುರಿತು ಟೀಕಿಸಿ ಅದನ್ನು ಅತ್ಯಂತ ಕ್ರೂರ ಮತ್ತು ಜನಾಂಗೀಯ ಆಡಳಿತವೆಂದು ನಿಂದಿಸಿದರು.
ಆಕ್ರಮಿತ ಪೆಲೆಸ್ಟೀನ್‌ನಲ್ಲಿ ಜನಾಂಗೀಯ ಸರ್ಕಾರ ಸ್ಥಾಪನೆ ಸಲುವಾಗಿ ಅವರು ಯುರೋಪ್ ಮತ್ತು ಅಮೆರಿಕದ ವಲಸೆಗಾರರನ್ನು ಅಟ್ಟಿದರೆಂದು ನೆಜಾದ್ ಹೇಳಿದರು. ಆದರೆ ನಾಜಿಗಳ ಹತ್ಯಾಕಾಂಡ ಕೇವಲ ಕಟ್ಟುಕಥೆಯೆಂದು ಇರಾನಿನ ನಾಯಕ ಬಣ್ಣಿಸಿದಾಗ ಪಾಶ್ಚಿಮಾತ್ಯ ರಾಷ್ಟ್ರಗಳು ಅದನ್ನು ಖಂಡಿಸಿ ಸಭಾತ್ಯಾಗ ಮಾಡಿದವು. ಆದರೆ ಇತರೆ ಪ್ರತಿನಿಧಿಗಳು ಸಭೆಯಲ್ಲೇ ಉಳಿದು ಅವರ ಮಾತುಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. |